ಕೋತಿ ಮರಿಯೊಂದನ್ನು ಕೊಂದ ನಾಯಿಗಳ ಮೇಲೆ ಪ್ರತೀಕಾರ | 250 ನಾಯಿಮರಿಗಳನ್ನು ನಿರ್ದಯವಾಗಿ ಹೊಸಕಿ ಹಾಕಿದ ಮಂಗಗಳು !

ನವದೆಹಲಿ: ಮಹಾರಾಷ್ಟ್ರದ ಬೀಡ್‌ನಿಂದ ಎರಡು ಕೋಮುಗಳ ಮದ್ಯೆ ಯುದ್ಧ ಶುರುವಾಗಿದೆ. ನಾಯಿ ಮತ್ತು ಕೋತಿ ಪಂಗಡಗಳ ನಡುವೆ ರಕ್ತಚರಿತ ಯುದ್ಧ ನಡೆಯುತ್ತಿದೆ. ಒಂದೇ ಒಂದು ಕೋತಿ ಮರಿಯನ್ನು ನಾಯಿಗಳು ಕೊಂದಿದ್ದಕ್ಕೆ ಇದಕ್ಕೆ ಪ್ರತಿಕಾರವಾಗಿ ಬರೋಬ್ಬರಿ 250 ನಾಯಿಮರಿಗಳನ್ನು ಕೋತಿಗಳು ಹೊಸಕಿ ಹಾಕಿವೆ.

ಇಂತಹದ್ದೊಂದು ವಿಚಿತ್ರ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲಗಾಂವ್‌ನಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ನಾಯಿಗಳ ಹಿಂಡು ಕೋತಿ ಮರಿಯನ್ನು ನಿರ್ದಯವಾಗಿ ಕೊಂದಿದ್ದವು. ಇದರಿಂದ ಆಕ್ರೋಶಗೊಂಡ ಮಂಗಗಳು ಪ್ಲಾನ್ ಮಾಡಿ ಆ ಊರಿನ ನಾಯಿಮರಿಗಳನ್ನು ಒಂದೊಂದಾಗಿ ಕೊಲ್ಲುತ್ತಾ ಬಂದಿವೆ. ಅದು ಕೂಡ ನಾಯಿಮರಿಗಳನ್ನು ಕೊಲ್ಲಲು ವಿಭಿನ್ನ ತಂತ್ರವನ್ನು ಅನುಸರಿಸುತ್ತಿವೆ. ಮೊದಲು
ಮಂಗಗಳು ನಾಯಿ ಮರಿಗಳನ್ನು ಹೊತ್ತೊಯ್ಯುತ್ತವೆ. ನಂತರ ಎತ್ತರದ ಕಟ್ಟಡದ ಮೇಲೆ ಹೊತ್ತೊಯ್ದು ಅಲ್ಲಿಂದ ಕೆಳಗೆ ಎಸೆಯುತ್ತವೆ. ಅಲ್ಲಿಂದ ಕೆಳಗೆ ಬಿದ್ದ ನಾಯಿಮರಿಗಳು ಮೃತಪಡುತ್ತವೆ.

ಇವೆಲ್ಲ ಮೊದಮೊದಲಿಗೆ ಊರವರ ಗಮನಕ್ಕೆ ಬಂದಿಲ್ಲ. ಯಾವಾಗ ಗ್ರಾಮಸ್ಥರು ಇದರ ಬಗ್ಗೆ ಗಮನಿಸಿದರೋ,
ಅಲ್ಲಿದ್ದವರು ಈ ನಾಯಿಗಳನ್ನು ರಕ್ಷಿಸಲು ಮುಂದಾದಾಗ ಮಂಗಗಳು ಮನುಷ್ಯರ ಮೇಲೂ ದಾಳಿ ಮಾಡತೊಡಗಿವೆ.  ಮಕ್ಕಳು ಮಂಗಗಳ ದಾಳಿಗೆ ಸಿಲುಕುತ್ತಿದ್ದಾರೆ. ಸುಮಾರು 5 ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಈಗ ನಾಯಿಮರಿಗಳು ಕಾಣುತ್ತಿಲ್ಲ. ಪ್ರಾಣಿಗಳು ಕೂಡಾ ಮನುಷ್ಯರಂತೆ ದ್ವೇಷ ಕಾರುವ ಈ ಸನ್ನಿವೇಶ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Leave A Reply

Your email address will not be published.