ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ, ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿ

Share the Article

ಅಕ್ರಮ ಕಸಾಯಿಖಾನೆಗೆ ಬಜರಂಗದಳದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೋಲೀಸರು ದಾಳಿ ಮಾಡಿದ ಘಟನೆ ನಡ ಗ್ರಾಮದ ಪಾರ್ನಡ್ಕ ಎಂಬಲ್ಲಿ ನಡೆದಿದೆ.

ಇಬ್ರಾಹಿಂ ಅವರ ಮಗ ಇಸಾಕ್, ಹಮೀದ್ ಅವರ ಮಗ ತಾಜುದ್ದೀನ್ ನಾವೂರು ಹಾಗೂ ಇಬ್ರಾಹಿಮ್ ಅವರ ಮಗ ರಜಾಕ್ ದೇರ್ಲಕ್ಕಿ ಮನೆಯಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದವರು.

ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply