ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿ!?|ಅದರಲ್ಲಿ ಆಯುಷ್ಯಾವಧಿಯನ್ನು ಏಕೆ ಬರೆಯಬೇಕು? ಆ ದಿನಾಂಕ ಕಳೆದ ನಂತರ ಆ ನೀರು ಕುಡಿಯಬಹುದೇ!?
ಪ್ರತಿಯೊಬ್ಬರು ಕೂಡ ಎಲ್ಲಿಯಾದರೂ ತೆರಳುವಾಗ ಅಥವಾ ಯಾವುದೇ ಸಮಾರಂಭಗಳಲ್ಲೂ ನೀರನ್ನು ಕೊಡಲು ಪ್ಲಾಸ್ಟಿಕ್ ಬಾಟಲಿಗಳನ್ನೇ ಉಪಯೋಗಿಸಲಾಗುತ್ತಿದೆ.ಆದರೆ ಈ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಎಷ್ಟು ಸೂಕ್ತ ಎಂಬುದು ನಾವೆಲ್ಲರೂ ತಿಳಿದುಕೊಳ್ಳಬೇಕಾದ ಸಂಗತಿ.ಹೀಗಿರುವಾಗ ಪ್ಲಾಸ್ಟಿಕ್ ಬಾಟಲಿ ನೀರು ಹೇಗೆ ಹಾನಿಯುಂತಾಗುತ್ತೆ?
ಹೌದು.ನಾವು ಬಳಸುವ ಪ್ರತಿಯೊಂದು ವಸ್ತುವಿಗೂ ಎಕ್ಸ್ಪ್ರೆರೆ ಡೇಟ್ ಬರೆದಿರುತ್ತಾರೆ.ಇದೇ ರೀತಿ ನೀರಿನ ಬಾಟಲಿಗಳ ಮೇಲೆ ಎಷ್ಟು ದಿನಗಳ ಒಳಗೆ ನೀರನ್ನು ಬಳಕೆ ಮಾಡುವುದು ಸೂಕ್ತ ಎಂದು ಬರೆಯಲಾಗಿರುತ್ತದೆ.ಇಷ್ಟಕ್ಕೂ ನೀರಿನ ಬಾಟಲಿಗೆ ಆಯುಷ್ಯಾವಧಿಯನ್ನು ಏಕೆ ಬರೆಯಬೇಕು? ಆ ದಿನದ ಬಳಿಕ ನೀರಿನ ಗುಣಮಟ್ಟವೇನಾದರೂ ಹಾಳಾಗುವುದೇ? ಎಂಬೆಲ್ಲಾ ಪ್ರಶ್ನೆಗಳು ಏಳುತ್ತವೆ.ಇದಕ್ಕೆಲ್ಲ ಗಮನಿಸಬೇಕಾದ ಉತ್ತರಗಳು ಇಲ್ಲಿದೆ..
ಆಹಾರ ಹಾಗೂ ಪಾನೀಯಗಳ ಪ್ರತಿಯೊಂದು ಉತ್ಪನ್ನದ ಮೇಲೂ ಉತ್ಪಾದಕರು ಅವುಗಳ ಆಯುಷ್ಯದ ದಿನಾಂಕ ಹಾಗೂ ಬಳಸಲಾದ ಪದಾರ್ಥಗಳ ಪಟ್ಟಿಯನ್ನು ಬರೆದಿರಬೇಕೆಂಬ ನಿಯಮಗಳಿವೆ ಎಂದು ನಿಮಗೆ ಗೊತ್ತೇ ಇದೆ. ಬಾಟಲಿ ನೀರು ಸಹ ಇದೇ ವರ್ಗಕ್ಕೆ ಸೇರುವ ಕಾರಣ, ನೀರಿಗೆ ಅಲ್ಲದಿದ್ದರೂ ಪ್ಲಾಸ್ಟಿಕ್ ಬಾಟಲಿಗೆ ಆಯುಷ್ಯದ ದಿನಾಂಕ ಬರೆದಿರಲೇಬೇಕು.
ಪ್ಲಾಸ್ಟಿಕ್ ಬಾಟಲಿಗಳು ನೀರಿನ ಮೇಲೆ ಅಪಾಯಕಾರಿ ಪರಿಣಾಮ ಉಂಟು ಮಾಡಬಲ್ಲವು. ಪ್ಲಾಸ್ಟಿಕ್ ಬಾಟಲಿಗಳ ವೆಚ್ಚ ಕಡಿಮೆ ಮಾಡಲು, ಉತ್ಪಾದಕರು ಅವುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ. ಇದರಿಂದಾಗಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ಸಂಗ್ರಹಿಸಿಟ್ಟ ನೀರು ಬ್ಯಾಕ್ಟೀರಿಯಾ, ಕೆಟ್ಟ ವಾಸನೆಗಳನ್ನು ಪಡೆದು, ರುಚಿ ಹಾಳು ಮಾಡಿಕೊಳ್ಳಬಲ್ಲದು.
ಪ್ಲಾಸ್ಟಿಕ್ ಬಾಟಲಿಗಳನ್ನು ಸೂರ್ಯನ ಬೆಳಕಿನಲ್ಲಿ ಹೆಚ್ಚಿನ ಅವಧಿಗೆ ಇಟ್ಟಾಗ, ಪ್ಲಾಸ್ಟಿಕ್ನಲ್ಲಿರುವ ರಾಸಾಯನಿಕ ಅಂಶ ನೀರಿನ ಒಳಗೆ ಸೇರಬಹುದು. ಈ ರಾಸಾಯನಿಕಗಳಲ್ಲಿ ಒಂದು ಬೈಫಿನೈಲ್ ಎ ಆಗಿದ್ದು, ಇದರಿಂದ ಹೃದಯ ಸಂಬಂಧಿ ಅನೇಕ ಕಾಯಿಲೆಗಳು, ಸ್ತನ ಕ್ಯಾನ್ಸರ್, ಹಾಗೂ ಮೆದುಳಿನಲ್ಲಿ ಹಾನಿಯಾಗುವ ಸಾಧ್ಯತೆಗಳು ಇರುತ್ತವೆ.