ಪಿಎಫ್‌ಐ ಎಸ್ಪಿ ಕಛೇರಿ ಚಲೋಗೆ ಅವಕಾಶವಿಲ್ಲ – ಕಮೀಷನರ್

Share the Article

ಮಂಗಳೂರು: ಉಪ್ಪಿನಂಗಡಿಯ ಘಟನೆಗೆ ಸಂಬಂಧಿಸಿ ಪಿಎಫ್‌ಐ ದ.ಕ.ಜಿಲ್ಲಾ ಸಮಿತಿಯು ಡಿ.17ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಕ್ಯಾಲಿಗೆ ಅವಕಾಶ ಇಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿ ಡಿ.17ರಂದು ಅಪರಾಹ್ನ 3 ಗಂಟೆಗೆ ನಗರದ ಕ್ಲಾಕ್ ಟವರ್‌ನಿಂದ ಎಸ್ಪಿ ಕಚೇರಿಗೆ ಚಲೋ (ಕ್ಯಾಲಿ) ನಡೆಸಲಾಗುವುದು ಎಂದು ಪಿಎಫ್‌ಐ ತಿಳಿಸಿತ್ತು. ಇದಕ್ಕೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಶಶಿಕುಮಾರ್ ಡಿ.17ರ ಕ್ಯಾಲಿಗೆ ಅವಕಾಶವಿಲ್ಲ ಎಂದಿದ್ದಾರೆ.

ಉಪ್ಪಿನಂಗಡಿ ಘಟನೆಗೆ ಸಂಬಂಧಿಸಿ ಪೊಲೀಸರಿಂದ ಅನ್ಯಾಯವಾಗಿದೆ. ನ್ಯಾಯಕ್ಕಾಗಿ ಎಸ್ಪಿ ಚಲೋ ನಡೆಸಲಾಗುವುದು ಎಂದು ಪಿಎಫ್‌ಐ ಮುಖಂಡರು ತಿಳಿಸಿದ್ದರು.

ಪೊಲೀಸ್ ಇಲಾಖೆಯು ಕ್ಯಾಲಿ ನಡೆಸಲು ಅವಕಾಶ ನಿರಾಕರಿಸಿದರೂ ಪ್ರತಿಭಟನೆ ನಡೆಸಲು ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

Leave A Reply