ಕೋಟಿಯೊಡತಿಯ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರಿಂದ ಮೂರನೇ ಬಾರಿ ನೋಟೀಸ್!! ಕೋಟಿ ಆಸ್ತಿಯ ಜೊತೆಗೆ ಆಕೆಗಿತ್ತು ನಶೆಯ ನಂಟು
ಆಕೆ ಕೋಟಿಗಟ್ಟಲೆ ಆಸ್ತಿಯ ಒಡತಿ.ಇತ್ತೀಚೆಗೆ ಬಂಧನವಾದ ಡ್ರಗ್ ಪೆಡ್ಲರ್ ಗಳೊಂದಿಗೆ ಆಕೆಗೆ ಸಂಪರ್ಕವಿತ್ತು ಎಂಬ ಅನುಮಾನದಲ್ಲಿ ಆಕೆಯ ಮೇಲೆ ಪೊಲೀಸರ ಹದ್ದಿನ ಕಣ್ಣು ಬಿದ್ದಿದೆ.ಡ್ರಗ್ಸ್ ವಿಚಾರದಲ್ಲಿ ಆಕೆಯ ವಿಚಾರಣೆಗೆ ಮೂರನೇ ಬಾರಿ ನೋಟೀಸ್ ನೀಡಲಾಗಿದೆ.
ಡ್ರಗ್ ಪೆಡ್ಲರ್ ಥಾಮಸ್ ಕಾಲು ಜೊತೆಗೆ ಸಂಪರ್ಕದಲ್ಲಿದ್ದ ಕೋಟಿಯೋಡತಿ,ಪ್ರೆಸ್ಟೀಜ್ ಗ್ರೂಪ್ ನ ಮಾಲೀಕ ಇರ್ಫಾನ್ ಸಹೋದರಿ,ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಅಂಜುಂ ರಜಾಕ್ ಜಂಗ್ ಎಂಬಾಕೆಗೆ ಬೆಂಗಳೂರಿನ ಗೋವಿಂದಪುರ ಠಾಣಾ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.ಈ ಮೊದಲು ಎರಡು ಬಾರಿ ನೋಟೀಸ್ ಸ್ವೀಕರಿಸಿದ್ದ ಆಕೆ ವಿಚಾರಣೆಗೆ ಹಾಜರಾಗಿರಲಿಲ್ಲ.
ಸೆಪ್ಟೆಂಬರ್ ನಲ್ಲಿ ಸಿಕ್ಕಿಬಿದ್ದಿದ್ದ ಡ್ರಗ್ ಪೆಡ್ಲರ್ ನ ಮೊಬೈಲ್ ನ್ನು ಸೀಜ್ ಮಾಡಿ ಸಾಕಷ್ಟು ಮಾಹಿತಿ ಕಲೆಹಾಕಿದಾಗ ಈಕೆಯೂ ಡ್ರಗ್ ತರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ನೇರವಾಗಿ ಆಕೆಯ ಮನೆಗೆ ತಲುಪಿಸುತ್ತಿದ್ದೆ ಎಂಬ ಥಾಮಸ್ ಮಾಹಿತಿಯ ಮೇರೆಗೆ ಆಕೆಗೆ ನೋಟಿಸ್ ನೀಡಲಾಗಿದೆ.