ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ | 84 ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ಹೈದರಾಬಾದ್ ಘಟಕದಲ್ಲಿ ಕಾರ್ಯನಿರ್ವಹಿಸಲು ಇಂಜಿನಿಯರ್ಗಳ ಒಟ್ಟು 84 ಹುದ್ದೆಗಳಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬಿಇಎಲ್ನಲ್ಲಿ ಟ್ರೇನಿ ಹಾಗೂ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿದ್ದು, ಆರಂಭದಲ್ಲಿ ಅಭ್ಯರ್ಥಿಗಳನ್ನು ಹೈದರಾಬಾದ್ನ ಘಟಕಕ್ಕೆ ನೇಮಕ ಮಾಡಲಾಗುವುದು ನಂತರ ದೇಶದ ಯಾವುದೇ ಭಾಗಕ್ಕಾದರೂ ವರ್ಗಾವಣೆ ಮಾಡಬಹುದಾಗಿದೆ.
ಇದಕ್ಕೆ ಸಿದ್ಧರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಟ್ರೇನಿ ಇಂಜಿನಿಯರ್ ಹುದ್ದೆಯು 1 ವರ್ಷ ಹಾಗೂ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಯು 2 ವರ್ಷದ ಅವಧಿಗೆ ಒಳಪಟ್ಟಿದ್ದು, ಕಾರ್ಯಾವಧಿಯನ್ನು ಮತ್ತೆ 3-4 ವರ್ಷ ವಿಸ್ತರಿಸಬಹುದು. ಶಿಫ್ಟ್ನಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು ಹಾಗೂ ಇಂಗ್ಲಿಷ್, ಹಿಂದಿ ಭಾಷಾ ಜ್ಞಾನ ಅವಶ್ಯ.
ಹುದ್ದೆ ವಿವರ
- ಟ್ರೇನಿ ಇಂಜಿನಿಯರ್ ಐ = 33
*-ಎಲೆಕ್ಟ್ರಾನಿಕ್ಸ್ – 19
*- ಮೆಕಾನಿಕಲ್- 11
*- ಕಂಪ್ಯೂಟರ್ ಇಂಜಿನಿಯರ್ – 3 - ಪ್ರಾಜೆಕ್ಟ್ ಇಂಜಿನಿಯರ್ ಐ = 51
*- ಎಲೆಕ್ಟ್ರಾನಿಕ್ಸ್ – 36
*- ಮೆಕಾನಿಕಲ್- 8
*- ಕಂಪ್ಯೂಟರ್ ಸೈನ್ಸ್ – 6
*- ಎಲೆಕ್ಟ್ರಿಕಲ್ – 1
ಶೈಕ್ಷಣಿಕ ಅರ್ಹತೆ:
ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್, ಮೆಕಾನಿಕಲ್,ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಬಿಇ, ಬಿ.ಟೆಕ್/ ಬಿಎಸ್ಸಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು, ಉಳಿದ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ 2 ವರ್ಷ, ಟ್ರೇನಿ ಇಂಜಿನಿಯರ್ಗೆ 1 ವರ್ಷ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ:
31.12.2021ಕ್ಕೆ ಅನ್ವಯವಾಗುವಂತೆ ಟ್ರೇನಿ ಇಂಜಿನಿಯರ್ಗೆ ಗರಿಷ್ಠ 25 ವರ್ಷ, ಪ್ರಾಜೆಕ್ಟ್ ಇಂಜಿನಿಯರ್ಗೆ ಗರಿಷ್ಠ 28 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.
ವೇತನ:
ಟ್ರೇನಿ ಇಂಜಿನಿಯರ್ಗೆ ಮೊದಲ ವರ್ಷ ಮಾಸಿಕ 25,000 ರೂ. 2ನೇ ವರ್ಷ ಮಾಸಿಕ 28,000, 3ನೇ ವರ್ಷ 31,000 ರೂ. ವೇತನ ನಿಗದಿಪಡಿಸಲಾಗಿದೆ. ಪ್ರಾಜೆಕ್ಟ್ ಇಂಜಿನಿಯರ್ಗೆ ಮೊದಲ ವರ್ಷ ಮಾಸಿಕ 35,000 ರೂ., 2ನೇ ವರ್ಷ 40,000 ರೂ., 3ನೇ ವರ್ಷ 45,000 ರೂ., 4ನೇ ವರ್ಷಕ್ಕೆ ಮಾಸಿಕ 50,000 ರೂ. ವೇತನ ಹೊರತಾಗಿ ವಾರ್ಷಿಕ 10,000 ಭತ್ಯೆಯಾಗಿ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಸಿದ್ಧಪಡಿಸಲಾದ ಆಯ್ದಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ವಿವರಗಳನ್ನು ಬಿಇಎಲ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಅರ್ಜಿ ಶುಲ್ಕ:
ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಟ್ರೇನಿ ಹುದ್ದೆಗೆ 200 ರೂ., ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 31.12.2021
ಅಧಿಸೂಚನೆಗೆ: https://bit.ly/3rX9uRi
ಮಾಹಿತಿಗೆ: http://www.bel-india.in