ಪುತ್ತೂರು: ಪ್ರಭಾರ ಮುಖ್ಯ ಶಿಕ್ಷಕಿ ಆತ್ಮಹತ್ಯೆಯ ಹಿಂದಿದೆ ಹಲವು ಅನುಮಾನ!! ಒಂದು ವಾರದ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಕೃತಜ್ಞತೆ ತಿಳಿಸಿದ್ದ ಪ್ರಿಯಾ ದಿಢೀರ್ ಆತ್ಮಹತ್ಯೆಗೆ ಶರಣಾಗಲು ಕಾರಣವೇನು!??
ಪುತ್ತೂರು: ಎರಡು ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ ಹಾರಾಡಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಪ್ರಿಯಾ ಕುಮಾರಿ(38) ಸಾವಿನ ಸುತ್ತ ಹಲವಾರು ಅನಮಾನಗಳು ಎದ್ದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಯ ಕಿರುಕುಳದ ಕಾರಣದಿಂದಾಗಿ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಘಟನೆಯ ಬಗ್ಗೆ ನಮ್ಮ ಪ್ರತಿನಿಧಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂಬ ಉತ್ತರ ಲಭಿಸಿದೆ. ಹಾಗಾದರೆ ಪ್ರಭಾರ ಮುಖ್ಯ ಶಿಕ್ಷಕಿಯ ಆತ್ಮಹತ್ಯೆಗೆ ನೈಜ ಕಾರಣವೇನು!? ಕೆಲ ದಿನಗಳ ಹಿಂದೆ ಶಿಕ್ಷಣಾಧಿಕಾರಿಗಳಿಗೆ ಸ್ವತಃ ಕರೆ ಮಾಡಿ ಕೃತಜ್ಞತೆ ತಿಳಿಸಿದ್ದ ಪ್ರಿಯಾ ಕುಮಾರಿ ಸಾವಿಗೆ ಶರಣಾಗಲು ಕಾರಣವೇನು ಎಂಬ ಅನುಮಾನ ಎಲ್ಲರಲ್ಲೂ ಕಾಡಿದೆ.
ತಾಲೂಕಿನ ಇತರ ಶಾಲೆಗಳ ಬಿಟ್ಟು, ಪುತ್ತೂರಿನ ಹೊರವಲಯದ ಹಾರಾಡಿ ಶಾಲೆಗೆ ನಾಲ್ಕು ಮಂದಿ ಅಥಿತಿ ಶಿಕ್ಷಕರನ್ನು ನೇಮಿಸಿದ್ದ ಶಿಕ್ಷಣಾಧಿಕಾರಿಗಳಿಗೆ ಕಳೆದೆರಡು ವಾರದ ಹಿಂದೆ ಪ್ರಿಯಾ ಕುಮಾರಿ ಕೃತಜ್ಞತೆ ಸಲ್ಲಿಸಿದ್ದರು.ಅದಲ್ಲದೇ ಮೊನ್ನೆಯ ದಿನ ಎರಡನೇ ಶನಿವಾರ ಆದುದ್ದರಿಂದ ಶಿಕ್ಷಣಾಧಿಕಾರಿ ಶಾಲೆಗೆ ಬರಲು ಅಸಾಧ್ಯವಾಗಿತ್ತು. ಸದ್ಯ ಶಿಕ್ಷಣಾಧಿಕಾರಿಯು ಶಾಲೆಗೆ ಭೇಟಿ ನೀಡಿ, ಇತರ ಶಿಕ್ಷಕರ ಎದುರು ಅವಮಾನಿಸಿದ ಕಾರಣ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಕೃತಜ್ಞತೆ ಪಡೆದುಕೊಂಡಿದ್ದ ಅಧಿಕಾರಿಯೇ ಕಿರುಕುಳ ನೀಡಿದ್ದಾರೆ ಎನ್ನುವುದು ನಂಬಲು ಅಸಾಧ್ಯ, ಇದರ ಹಿಂದೆ ಇನ್ಯಾವುದೋ ಪಿತೂರಿ ಇರಬಹುದು ಎಂಬುವುದು ಜನಸಾಮಾನ್ಯರ ವಾದ.ಅದೇನೇ ಇರಲಿ ಪ್ರಭಾರ ಮುಖ್ಯ ಶಿಕ್ಷಕಿ ಆತ್ಮಹತ್ಯೆಯ ಹಿಂದೆ ಹಲವು ಅನುಮಾನಗಳಿದ್ದು, ಪೊಲೀಸ್ ತನಿಖೆಯ ಬಳಿಕ ನಿಜಾಂಶ ಹೊರಬರಲಿದೆ.