ಉಪ್ಪಿನಂಗಡಿ :ಠಾಣೆಗೆ ನುಗ್ಗಿ ಹಾನಿ ಮಾಡಲು ಯತ್ನಿಸಿದರಿಂದ ಲಾಠಿಚಾರ್ಜ್ – ಎಸ್ಪಿ ಋಷಿಕೇಶ್ ಸೋನಾವಣೆ

ಪುತ್ತೂರು : ಉಪ್ಪಿನಂಗಡಿಯಲ್ಲಿ ನಡೆದ ಗಲಭೆ ಮತ್ತು ಲಾಠಿಚಾರ್ಜ್‌ಗೆ ಸಂಬಂಧಿಸಿದಂತೆ ಎಸ್‌ಪಿ ರಿಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ.

 

ಉಪ್ಪಿನಂಗಡಿ ಗಲಭೆ ಕುರಿತು ಎಸ್​​ಪಿ ರಿಷಿಕೇಶ್ ಸೋನಾವಣೆ ಪ್ರತಿಕ್ರಿಯೆಕೆಲ ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿ.13 ರಂದು ಸಿನಾನ್ ಎಂಬಾತನನ್ನು ಬಂಧಿಸಲಾಗಿತ್ತು. ಬಂಧಿತ ಸಿನಾನ್ ನೀಡಿದ ಮಾಹಿತಿಯಂತೇ ಮುಸ್ತಫಾ, ಹಮೀದ್, ಝಕಾರಿಯಾ ಎಂಬ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.

ಅವರನ್ನು ಬಿಡುಗಡೆಗೊಳಿಸುವಂತೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರಿಂದ ಠಾಣೆ ಮುಂದೆ ಪ್ರತಿಭಟನೆ ನಡೆದಿತ್ತು.ಪ್ರತಿಭಟನಾಕಾರರು ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದರಿಂದ ಪೊಲೀಸರು ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೂ ರಾತ್ರಿ 9.30ಕ್ಕೆ ಮತ್ತೆ ಠಾಣೆಗೆ ಮುತ್ತಿಗೆ ಹಾಕಿ ಠಾಣೆಯ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಲಾಗಿದೆ ಎಂದರು. ಈ ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.