ಕೋವಿಡ್ ಸೋಂಕಿಗೆ ಗರ್ಭಿಣಿ ಕೋಮಾಗೆ | ಏಳು ವಾರಗಳ ಬಳಿಕ ಪ್ರಜ್ಞೆ ಬಂದಾಗ ಮಡಿಲಲ್ಲಿ ಹೆಣ್ಣು ಮಗು | ನಡೆದಿದೆ ಹೀಗೊಂದು ಅಪರೂಪದ ಘಟನೆ

ಕೋವಿಡ್ ಸೋಂಕಿಗೆ ಒಳಗಾಗಿದ್ದ ಗರ್ಭಿಣಿಯೊಬ್ಬರು ಕೋಮಾಗೆ ಜಾರಿದ್ದು,7 ವಾರಗಳ ಬಳಿಕ ಕೋಮಾದಿಂದ ಎಚ್ಚರವಾದ ಅವರಿಗೆ ತಾನು ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಷಯ ತಿಳಿದು ಬಂದಿರುವ ಅಪರೂಪದ ಘಟನೆ ನಡೆದಿದೆ.

ಗರ್ಭಿಣಿಯಾಗಿದ್ದಾಗ ಕೋವಿಡ್ ಸೋಂಕಿಗೆ ಒಳಗಾದ ನಂತರ ಲಾರಾ ವಾರ್ಡ್ ಅವರ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.ಡೆಲಿವರಿ ದಿನಾಂಕ ಅಕ್ಟೋಬರ್ 15 ರ ಕೊನೆಯ ದಿನಾಂಕಕ್ಕಿಂತ ಎರಡು ವಾರಗಳಿಗಿಂತ ಮುಂಚಿತವಾಗಿ ಅವರಿಗೆ, ತುರ್ತು ಸಿ-ಸೆಕ್ಷನ್‌ ಮಾಡಬೇಕಾಗಿ ಬಂದಿತ್ತು. ರಾಯಲ್ ಬೋಲ್ಟನ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಲಾರಾಗೆ ಹೆರಿಗೆ ಮಾಡಿದ್ದರು. ಮಗುವಿಗೆ ಹೋಪ್ ಎಂದು ಹೆಸರಿಡಲಾಗಿದ್ದು, ಜನನದ ಸಮಯದಲ್ಲಿ 3 ಪೌಂಡ್ 7 ಔನ್ಸ್ ತೂಕ ಹೊಂದಿದ್ದು, ಮಗು ಆರೋಗ್ಯವಾಗಿತ್ತು.

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಲಾರಾ ಕೋವಿಡ್‌ ವಿರುದ್ಧ ದೀರ್ಘಕಾಲ ಹೋರಾಡಿದ್ದಾರೆ. ಬೇಸಿಗೆಯ ರಜಾದಿನಗಳಲ್ಲಿ ಸ್ವಲ್ಪ ಕೆಮ್ಮು ಶುರುವಾಗಿದ್ದ ಲಾರಾಗೆ, ಕೋವಿಡ್ ಪರೀಕ್ಷೆಯ ವೇಳೆ ವರದಿ ಪಾಸಿಟಿವ್ ಬಂದಿತ್ತು. ಆದರೆ, ಉಸಿರಾಟದ ತೊಂದರೆ ಉಂಟಾದಾಗ ಆಸ್ಪತ್ರೆಯ ತುರ್ತುನಿಗಾದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.

ತನ್ನ ಗರ್ಭಾವಸ್ಥೆಯಲ್ಲಿ ಲಾರ್ ಕೋವಿಡ್ ಲಸಿಕೆ ತೆಗೆದುಕೊಳ್ಳದ ಕಾರಣ ವೈರಸ್‌ನೊಂದಿಗೆ ಸುದೀರ್ಘ ಕಾಲ ಹೋರಾಡಬೇಕಾಯಿತು. ಯುಕೆಯಲ್ಲಿ ಮೊದಲಿಗೆ ಗರ್ಭಿಣಿಯರಿಗೆ ಲಸಿಕೆ ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿರಲಿಲ್ಲ. ಆದರೆ, ಗರ್ಭಿಣಿಯರು ಕೂಡ ಲಸಿಕೆ ತೆಗೆದುಕೊಳ್ಳಬಹುದು ಎಂಬ ನಿಯಮ ಬಂದಾಗ ಲಾರಾಗೆ ಅದಾಗಲೇ ವೈರಸ್ ತಗುಲಿತ್ತು.

ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಹೆರಿಗೆ ವಾರ್ಡ್ ಗೆ ಲಾರಾ ಅವರ ಪತಿ, ಕುಟುಂಬಸ್ಥರಿಗೆ ಅನುಮತಿ ನೀಡಲಾಗಿರಲಿಲ್ಲ. ಹೀಗಾಗಿ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಹೆರಿಗೆಯನ್ನು ಮಾಡಲಾಯಿತು. ಬಳಿಕ ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಕೋಮಾಗೆ ಜಾರಿದ್ದರು.ಇದೀಗ 7ವಾರದ ಬಳಿಕ ಎಚ್ಚೆತ್ತು ತಾನು ತಾಯಿಯಾಗಿರುವ ವಿಷಯ ತಿಳಿದು ಖುಷಿ ಪಟ್ಟಿದ್ದಾರೆ.

Leave A Reply

Your email address will not be published.