ಪೊಲೀಸರಿಗೆ ಪರಿಸ್ಥಿತಿ ಎದುರಿಸಲು ಮುಕ್ತ ಅವಕಾಶ ನೀಡಬೇಕು -ಯು.ಟಿ.ಖಾದರ್ | ಸಮಾಜ ವಿರೋಧಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ಇಲ್ಲ-ಆರಗ ಜ್ಞಾನೇಂದ್ರ

ಕರಾವಳಿ ಜಿಲ್ಲೆಯಲ್ಲಿ, ಕೋಮು ಸೌಹಾರ್ದವನ್ನು ಕಲುಷಿತ ಗೊಳಿಸುವ, ಸಮಾಜ ವಿರೋಧಿ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ, ಬಗ್ಗು ಬಡಿಯಲಾಗುವುದು, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ವಿಧಾನಸಭೆಯಲ್ಲಿ,ತೀವ್ರ ಎಚ್ಚರಿಕೆ ನೀಡಿದ್ದಾರೆ.

 

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ, ಕಾಂಗ್ರೆಸ್ ಸದಸ್ಯ ಯು ಟಿ ಖಾದರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು, “ಕರಾವಳಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೋಮು ಸಾಮರಸ್ಯ ವಾತಾವರಣವನ್ನು ಕೆಡಿಸುವ, ಕೆಲವರ, ಪ್ರಯತ್ನಗಳ ಬಗ್ಗೆ ವರದಿಗಳನ್ನು ಗಮನಿಸಿದ್ದೇನೆ, ಅವುಗಳಿಗೆ ನಿಯಂತ್ರಣ ಹೇರುವ ಬಗ್ಗೆ ಗಂಭೀರ ಪ್ರಯತ್ನ ನಡೆದಿದೆ” ಎಂದು ಸಚಿವರು, ತಿಳಿಸಿದರು.

ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಯು ಟಿ ಖಾದರ್, ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ಪ್ರಕರಣಗಳು ಹೆಚ್ಚುತ್ತಿದ್ದು,ವಿದ್ಯಾರ್ಥಿಗಳ ಮೇಲೆ ಹಲ್ಲೆ ಘಟನೆಗಳು, ತ್ರಿಶೂಲ ದೀಕ್ಷೆಯಂತ ಕಾರ್ಯಕ್ರಮಗಳಿಂದ ಕೋಮು ಸೌಹಾರ್ದಕ್ಕೆ ಸವಾಲಾಗಿದೆ, ಪೊಲೀಸರಿಗೆ ಪರಿಸ್ಥಿತಿ ಎದುರಿಸಲು, ಮುಕ್ತ ಅವಕಾಶ ನೀಡಬೇಕು, ಎಂದು ಹೇಳಿದರು.

ಇತ್ತೀಚೆಗೆ, ಉಪ್ಪಿನಂಗಡಿ ಪಟ್ಟಣದಲ್ಲಿ ಪೊಲೀಸರ ಮೇಲೆಯೂ ಹಲ್ಲೆಯಾಗಿದೆ, ಸಾಮಾಜಿಕ ಜಾಲತಾಣ ವನ್ನು ದುರುಪಯೋಗ ಪಡಿಸಿಕೊಂಡು, ದೇಶ ವಿರೋಧಿ ಸಂದೇಶಗಳನ್ನು ಹರಿಬಿಡಲಾಗುತ್ತಿದೆ, ಎಂದ ಸಚಿವರು ” ಸ್ಥಳೀಯ ಪೊಲೀಸರು ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿ ಕ್ರಮ ಕೈಗೊಂಡಿದ್ದಾರೆ, ಅವರ ಪ್ರಯತ್ನ ದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದೂ ಸಚಿವರು ಹೇಳಿದರು.

Leave A Reply

Your email address will not be published.