ಈ ಸುಲಭ ಲಾಭದಾಯಕ ವ್ಯವಹಾರ ಆರಂಭಿಸಿ, ಲಕ್ಷಾಂತರ ರೂಪಾಯಿ ಲಾಭ ಪಡೆಯಿರಿ | ಈ ವ್ಯವಹಾರಕ್ಕಿದೆ ಕೇಂದ್ರ ಸರ್ಕಾರದ ಸಹಾಯ !!
ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಆಗುತ್ತಿರುವುದನ್ನು ನೋಡಬಹುದು.ಈ ಮಾಲಿನ್ಯದಿಂದ ಹದಗೆಡುತ್ತಿರುವ ಪರಿಸ್ಥಿತಿಯ ನಡುವೆ ಕೇಂದ್ರ ಸರ್ಕಾರವು ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ.ಇದೀಗ ಇದರ ಬದಲಾಗಿ ಪೇಪರ್ ತಯಾರಿ ಪ್ಲೇಟ್, ಕಪ್ ಬಳಕೆಗೆ ಬಂದಿದೆ.ಇಂತಹ ಪರಿಸ್ಥಿತಿಯಲ್ಲಿ ನೀವು ಇದರಿಂದ ಲಾಭದಾಯಕ ವ್ಯವಹಾರ ಮಾಡಲು ಬಯಸಿದರೆ ಇದು ನಿಮಗೆ ಉತ್ತಮ ಅವಕಾಶ.
ಹೌದು.ನೀವು ಬಳಸಿ ಬಿಸಾಡಬಹುದಾದ ಕಾಗದದ ಕಪ್‌ಗಳ ವ್ಯಾಪಾರವನ್ನು ಪ್ರಾರಂಭಿಸಬಹುದು.ಇತ್ತೀಚಿನ ದಿನಗಳಲ್ಲಿ ಪೇಪರ್ ಕಪ್‌ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದ್ದು,ನೀವು ಕಡಿಮೆ ವೆಚ್ಚದಲ್ಲಿ ಈ ವ್ಯವಹಾರ ಪ್ರಾರಂಭಿಸಬಹುದು ಮತ್ತು ಹೆಚ್ಚಿನ ಲಾಭವನ್ನು ಗಳಿಸಬಹುದು. ಈ ಉದ್ಯಮ ಆರಂಭಿಸಲು ಮುದ್ರಾ ಯೋಜನೆಯಡಿ ಸರ್ಕಾರವೂ ನಿಮಗೆ ಸಹಾಯ ಮಾಡುತ್ತಿದೆ. ಹಾಗಾದರೆ ಈ ಅದ್ಭುತ ವ್ಯವಹಾರದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕೇಂದ್ರ ಸರ್ಕಾರದ ಮುದ್ರಾ ಸಾಲದಿಂದಲೂ ಈ ವ್ಯವಹಾರಕ್ಕೆ ಸಹಾಯ ಲಭ್ಯವಿದ್ದು,ಮುದ್ರಾ ಯೋಜನೆಯಡಿ ಸರ್ಕಾರವು ನಿಮಗೆ ಸಹಾಯಧನ ನೀಡುತ್ತದೆ. ಈ ಯೋಜನೆಯಡಿ ನೀವು ಒಟ್ಟು ಯೋಜನಾ ವೆಚ್ಚದ ಶೇ.25 ರಷ್ಟನ್ನು ಹೂಡಿಕೆ ಮಾಡಬೇಕಾಗುತ್ತದೆ. ಮುದ್ರಾ ಯೋಜನೆಯಡಿ ಸರ್ಕಾರವು ಶೇ.75ರಷ್ಟು ಸಾಲ ನೀಡಲಿದೆ. ಇದನ್ನು ಬಳಸಿಕೊಂಡು ನೀವು ಈ ವ್ಯವಹಾರವನ್ನು ಶುರು ಮಾಡಬಹುದು.
ಈ ವ್ಯವಹಾರ ಪ್ರಾರಂಭಿಸಲು ಯಂತ್ರದ ಅಗತ್ಯವಿದ್ದು,ಇದು ವಿಶೇಷವಾಗಿ ದೆಹಲಿ, ಹೈದರಾಬಾದ್, ಆಗ್ರಾ ಮತ್ತು ಅಹಮದಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ಲಭ್ಯವಿರುತ್ತದೆ. ಇಂತಹ ಯಂತ್ರಗಳನ್ನು ತಯಾರಿಸಲು ಇಂಜಿನಿಯರಿಂಗ್ ಕೆಲಸ ಮಾಡುವ ಕಂಪನಿಗಳಿವೆ. ನಿಮಗೆ ಬೇಕಾದ ರೀತಿಯ ಯಂತ್ರಗಳನ್ನು ಒದಗಿಸಿಕೊಡುತ್ತಾರೆ. ಈ ವ್ಯವಹಾರ ಮಾಡಲು ನಿಮಗೆ 500 ಚದರ ಅಡಿ ಪ್ರದೇಶ ಬೇಕಾಗುತ್ತದೆ. ಯಂತ್ರೋಪಕರಣಗಳು, ಉಪಕರಣಗಳು ಮತ್ತು ಪೀಠೋಪಕರಣಗಳು, ಬಣ್ಣ, ವಿದ್ಯುತ್ ಸೇರಿದಂತೆ ಇತರೆ ಸೆಟ್ ಅಪ್ ಗಳಿಗೆ ಸುಮಾರು 10.70 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ನೀವು ನುರಿತ ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಿದರೆ ತಿಂಗಳಿಗೆ ಸುಮಾರು 35 ಸಾವಿರ ರೂ. ಖರ್ಚಾಗುತ್ತದೆ.
ಯಾರೂ ಬೇಕಾದರೂ ಈ ಉದ್ಯಮವನ್ನು ಪ್ರಾರಂಭಿಸಬಹುದು. ನೀವು ವರ್ಷದಲ್ಲಿ 300 ದಿನ ಕೆಲಸ ಮಾಡಿದರೆ ಸುಮಾರು 2.20 ಕೋಟಿ ಯೂನಿಟ್ ಪೇಪರ್ ಕಪ್ ಗಳನ್ನು ತಯಾರಿಸಬಹುದು. ನೀವು ಮಾರುಕಟ್ಟೆಯಲ್ಲಿ 1 ಕಪ್ ಅಥವಾ ಲೋಟಕ್ಕೆ ಸುಮಾರು 30 ಪೈಸೆಗೆ ಮಾರಾಟ ಮಾಡಬಹುದು. ಈ ರೀತಿ ಇದು ನಿಮಗೆ ಬಂಪರ್ ಲಾಭವನ್ನು ನೀಡುತ್ತದೆ. ನಿಮ್ಮ ಬಜೆಟ್ ಗೆ ತಕ್ಕಂತೆ ಈ ವ್ಯವಹಾರ ಪ್ರಾರಂಭಿಸಿದರೆ ನೀವು ಕೈತುಂಬಾ ಗಳಿಸಬಹುದು.ಹಾಗಿದ್ರೆ ಇನ್ನು ಯಾಕೆ ತಡ? ಕೆಲಸ ಕೈಗೆತ್ತಿಕೊಳ್ಳಿ!!