ಸುಳ್ಯ: ವಿಹಿಂಪ ಸುಳ್ಯ ಪ್ರಖಂಡ ವತಿಯಿಂದ ಸುಳ್ಯದಲ್ಲಿ ಗೀತಾ ಜಯಂತಿ ಅಂಗವಾಗಿ ಶೌರ್ಯ ಸಂಚಲನ!! ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಭಾಗಿ-ಸುಳ್ಯ ಪೇಟೆಯೇ ಕೇಸರಿಮಯ
ಎತ್ತ ನೋಡಿದರೂ ಕೇಸರಿಮಯ. ಕೇಸರಿ ಬಾವುಟ, ಶಾಲು, ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು. ಇದೆಲ್ಲಾ ಕಂಡುಬಂದದ್ದು ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಭದ್ರಕೋಟೆ ಸುಳ್ಯ ದಲ್ಲಿ.ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ವತಿಯಿಂದ ನಡೆದ ಹಿಂದೂ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ.
ಸುಳ್ಯದ ಹಳೇಗೇಟಿನಿಂದ ಪ್ರಾರಂಭವಾದ ಶೌರ್ಯ ಸಂಚಲನವು ನಿವೃತ್ತ ಶಿಕ್ಷಕ ಕೇಶವ ಮಾಸ್ಟರ್ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
ಬಳಿಕ ಸುಳ್ಯದ ಉದ್ಯಮಿ ಪ್ರಭಾಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಚೆನ್ನಕೇಶವ ದೇವಾಲಯದ ವಠಾರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ,ದಿಕ್ಸೂಚಿ ಭಾಷಣಗಾರರಾಗಿ ಭಜರಂಗದಳ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಸೂರ್ಯನಾರಾಯಣ ಪಾಲ್ಗೊಂಡಿದ್ದರು.ಜಿಲ್ಲೆಯ ಭಜರಂಗದಳ ಪ್ರಮುಖರು, ಹಿಂದೂ ಕಾರ್ಯಕರ್ತರು ಸಾವಿರ ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.