ಮಂಗಳೂರು:ಕಾರಿನಲ್ಲಿದ್ದ ವ್ಯಕ್ತಿಗೆ ಇರಿತ ಪ್ರಕರಣ-ನಾಲ್ವರು ವಶಕ್ಕೆ!! ಸ್ಥಳದಲ್ಲಿ ಮಹಿಳೆಯ ಚಪ್ಪಲ್ ಪತ್ತೆ-ಎಲ್ಲಾ ಆಯಾಮಗಳಿಂದಲೂ ತನಿಖೆ ಚುರುಕು ಶೀಘ್ರವೇ ಆರೋಪಿಗಳ ಬಂಧನ

Share the Article

ಮಂಗಳೂರು: ನಗರದ ಹೊರವಲಯದ ನೀರುಮಾರ್ಗ ಪಡು ಎಂಬಲ್ಲಿ ನಿನ್ನೆ ರಾತ್ರಿ ನಡೆದ ಇರಿತ ಪ್ರಕರಣದ ಸಂಬಂಧ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಸ್ಥಳೀಯ ನಿವಾಸಿ ಅಬ್ದುಲ್ ರಜಾಕ್ ಎಂಬವರ ಮೇಲೆ 5 ರಿಂದ 6 ಜನರ ತಂಡ ಬೀರ್ ಬಾಟಲ್ ಸಹಿತ ಇನ್ನಿತರ ವಸ್ತುಗಳಿಂದ ಹಲ್ಲೆ ನಡೆಸಿತ್ತು. ಸದ್ಯ ಗಾಯಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಹಲ್ಲೆಗೆ ಸ್ಪಷ್ಟ ಕಾರಣ ಇನ್ನೇನು ತಿಳಿದುಬರಬೇಕಾಗಿದೆ. ಕಾರಿನಲ್ಲಿ ಮಹಿಳೆಯ ಚಪ್ಪಲ್ ದೊರೆತಿದ್ದು ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ಕೈಗೆತ್ತಿಕೊಂಡಿದ್ದಾರೆ, ಶೀಘ್ರದಲ್ಲೇ ಆರೋಪಿಗಳ ಬಂಧನ ಸಾಧ್ಯತೆಯಿದೆ.

Leave A Reply