ಮಹಾಮಾರಿಯಿಂದ ರಾಜ್ಯದಲ್ಲಿ ಶಾಲೆಗಳ ಬಾಗಿಲು ಮುಚ್ಚುವುದು ಕನಸಿನ ಮಾತು!! ಹುಸಿ ಮಾತಿಗೆ ಉತ್ತರಿಸಿದ ಸಚಿವರು ಹೇಳಿದ್ದೇನು!??

Share the Article

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಕಂಡುಬಂದಿದ್ದು, ರೂಪಾಂತರಿ ವೈರಸ್ ಬಗೆಗೆ ಸರ್ಕಾರಿ-ಖಾಸಗಿ ಸಹಿತ ವಸತಿ ಶಾಲೆಗಳಲ್ಲಿ ಕೋವಿಡ್ ಸುರಕ್ಷತಾ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಧ್ಯಮದೊಂದಿಗೆ ಮಾತನಾಡಿದರು.

ಸದ್ಯ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹೆಚ್ಚಿನ ನಿಗಾ ವಹಿಸಿ ಸೂಕ್ತ ಸುರಕ್ಷತೆಯನ್ನು ಪಾಲಿಸಲಾಗುತ್ತಿದ್ದು, ಕೆಲವೊಂದು ಪ್ರಕರಣಗಳು ಸೂಕ್ಷ್ಮವಾಗಿವೆ. ಈ ನಡುವೆ ಯಾವ ಶಾಲೆಗಳಲ್ಲೂ ಹಾಜರಾತಿ ಕಡಿಮೆಯಾಗಿಲ್ಲ, ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗೆ ಹಾಜರಾಗುತ್ತಿದ್ದಾರೆ ಹೀಗಿರುವಾಗ ಶಾಲಾ ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲವೆಂದು ಹೇಳಿದ್ದಾರೆ.

ಮಕ್ಕಳು ಹಾಗೂ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಪಡೆದಿರಬೇಕು, ಇಲ್ಲವಾದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವುದಿಲ್ಲ ಎಂದು ಹೇಳಿರುವುದು ಮಾತ್ರವಲ್ಲದೆ ಅದನ್ನೇ ಕಡ್ಡಾಯಗೊಳಿಸಿಲ್ಲ, ಹೀಗಾದರೂ ಎಲ್ಲರೂ ವಾಕ್ಸಿನ್ ಪಡೆದುಕೊಳ್ಳಲಿ ಎಂಬುವುದು ಚಿಂತನೆ. ಸದ್ಯ ಎಲ್ಲಾ ಪೋಷಕರು ವಾಕ್ಸಿನ್ ಗಾಗಿ ಸರದಿ ಸಾಲಿನಲ್ಲಿ ನಿಂತಿರುವುದರಿಂದ ಶಾಲಾ ಕಾಲೇಜು ಬಂದ್ ಮಾಡುವ ಮಾತೇ ಇಲ್ಲವೆಂದು ಭರವಸೆ ನೀಡಿದ್ದಾರೆ.

Leave A Reply