ಸೇನಾ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ | ಹೊಡೆದು ಉರುಳಿಸಿತೇ ಎಲ್ ಟಿ ಟಿ ಇ ??!!

ಹವಾಮಾನ ವೈಪರಿತ್ಯದಿಂದ ಸಂಭವಿಸಿದೆ ಎನ್ನಲಾಗುತ್ತಿರುವ ದೇಶದ ಸೇನಾ ಮುಖ್ಯಸ್ಥರನ್ನು ಹೊತ್ತಿದ್ದ ಹೆಲಿಕಾಫ್ಟರ್​​ ದುರಂತದ ಬಗ್ಗೆ ಇದೀಗ ಅಲ್ಲಲ್ಲಿ ಅನುಮಾನ ವ್ಯಕ್ತವಾಗುತ್ತಿದೆ.

ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಿವೃತ್ತ ಬ್ರಿಗೇಡಿಯರ್ ಸುಧೀರ್ ಸಾವಂತ್
ಸಿಡಿಎಸ್​ ಹೆಲಿ ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿಡಿಎಸ್ ಹೆಲಿಕಾಪ್ಟರ್ ಗುರಿಯಾಗಿಸುವುದು ಎಲ್ ಟಿಟಿಇಯ ಕಾರ್ಯತಂತ್ರದ ಒಂದು ಭಾಗವಾಗಿರಬಹುದು ಎಂದು ಅವರು ಅನುಮಾನಿಸಿದ್ದಾರೆ. ಎಲ್ ಟಿಟಿಇಯ ಕೇಡರ್ ಐಐಡಿ ಬಾಂಬ್ ಗಳನ್ನು ಆಪರೇಟ್ ಮಾಡುವಲ್ಲಿ ಪರಿಣತರು. ಇದಲ್ಲದೆ, ಎಲ್ ಟಿಟಿಇ ಭಾರತದ ಅತಿದೊಡ್ಡ ಸೈನಿಕನನ್ನು (ಸೈನ್ಯದ ನಾಯಕನನ್ನು) ಕೊಲ್ಲುವ ಉದ್ದೇಶವನ್ನೂ ಹೊಂದಿದೆ. ಈ  ಹೆಲಿಕಾಪ್ಟರ್ ಅಪಘಾತದ ಬಗ್ಗೆ ಎನ್ ಐಎ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬ್ರಿಗೇಡಿಯರ್ ಸಾವಂತ್ ಯಾವುದೇ ವಿಮಾನ ಅಥವಾ ಹೆಲಿಕಾಪ್ಟರ್ ಅಪಘಾತಗಳಿಗೆ ಮೂರು ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ಒಂದು, ತಾಂತ್ರಿಕ ದೋಷ. ಎರಡನೇದಾಗಿ ಪೈಲಟ್ n ತಪ್ಪುಗಳು. ಮತ್ತು ಮೂರನೆಯದಾಗಿ ಬಾಂಬ್ ದಾಳಿ ಮೂಲಕ ಸ್ಫೋಟ ಕಾರಣವಾಗುತ್ತದೆ. ಆದರೆ ಮೊದಲ ಎರಡು ಕಾರಣಗಳಲ್ಲಿ, ಪೈಲಟ್ ಮತ್ತು ವಾಯು ನಿಯಂತ್ರಣದ ಕಡೆ ಮಾತುಕತೆ ಇರುತ್ತದೆ. ಏನಾದ್ರೂ ಯಾಂತ್ರಿಕ ತೊಂದರೆ ಆದ್ರೆ ಪೈಲಟ್ ಸಹಾಯವನ್ನು ಕೇಳುತ್ತಾನೆ. ಈ ಎಲ್ಲಾ ಸಂಭಾಷಣೆಗಳು ಬ್ಲ್ಯಾಕ್​ ಬಾಕ್ಸ್​ನಲ್ಲಿ ರೆಕಾರ್ಡ್ ಆಟೋ ರೆಕಾರ್ಡ್ ಆಗ್ತವೆ. ಸದ್ಯ ಬ್ಲ್ಯಾಕ್​ ಬಾಕ್ಸ್​ದೊರೆತಿದೆ. ಆದ್ದರಿಂದ, ಇದು ಕೇವಲ ಅಪಘಾತವಾಗಿದ್ದರೆ, ಮಾಹಿತಿ ಹೊರಬರುತ್ತದೆ.

ಈಗ ಅನುಮಾನ ಕಾಡ್ತಿರೋಡು ಮೂರನೆಯ ಆತಂಕd ಬಗ್ಗೆ. ಅಂದರೆ ಹೆಲಿಕಾಪ್ಟರ್ ಮೇಲೆ ಬಾಂಬ್ ದಾಳಿ ಮಾಡಿ ಸ್ಫೋಟಿಸಿರಬಹುದು ಎನ್ನುವುದು ಒಂದು ಗುಮಾನಿ. ಈ ಸಂದರ್ಭದಲ್ಲಿ, ಪೈಲಟ್ ಮತ್ತು ವಾಯು ನಿಯಂತ್ರಣದ ನಡುವೆ ಯಾವುದೇ ಸಂವಹನವಿರುವುದಿಲ್ಲ ಮತ್ತು ಎಲ್ಲವೂ ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಈ ಪ್ರದೇಶವು ಎಲ್ ಟಿಟಿಇಯ ಭದ್ರಕೋಟೆಯಾಗಿರುವುದರಿಂದ, ದಾಳಿಯ ಹಿಂದೆ ಎಲ್ ಟಿಟಿಇ ಸ್ಲೀಪರ್ ಸೆಲ್ ಗಳು ಇರಬಹುದು ಎಂಬ ಬಲವಾದ ಆತಂಕವಿದೆ ಎಂದು ಅನುಮಾನವನ್ನು ಬ್ರಿಗೇಡಿಯರ್ ಸಾವಂತ್ ಅವರು ವ್ಯಕ್ತ ಪಡಿಸಿದ್ದಾರೆ. ತನಿಖೆ ಶುರು ಆಗಿದೆ. ಸದ್ಯದಲ್ಲೇ ಎಲ್ಲಾ ಬಯಲಾಗಲಿದೆ.

Leave A Reply

Your email address will not be published.