ಆಲಂಕಾರು: ಪತಿಯ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ

Share the Article

ಆಲಂಕಾರು: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಯಿಲ ಗ್ರಾಮದ ಪಟ್ಟೆ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಪಟ್ಟಿ ನಿವಾಸಿ ಅಂಗಾರ ಎಂಬರ ಪತ್ನಿ ಹರಿಣಿ (41) ಎಂದು ಗುರುತಿಸಲಾಗಿದೆ.

ಇವರ ಪತಿ ಅಂಗಾರ ವಿಪರೀತ ಮದ್ಯಪಾನ ಸೇವನೆಯ ಚಟ ಹೊಂದಿದ್ದರು. ಹಾಗೆಯೇ ಪತ್ನಿಗೆ ದೈಹಿಕ ಹಿಂಸೆಯನ್ನು ಕೂಡಾ ನೀಡುತ್ತಿದ್ದರು. ಇದನ್ನು ಸಹಿಸದ ಹರಿಣಿ ಎರಡು ವರ್ಷಗಳಿಂದ ತವರು ಮನೆ ಪರ್ಲಡ್ಕದ ಕೋಡಿಬಾಲ್ ನಲ್ಲಿ ವಾಸವಾಗಿದ್ದರು.

ಆದರೆ ಇತ್ತೀಚೆಗೆ ಮತ್ತೆ ಗಂಡನೊಂದಿಗೆ ವಾಸ ಮಾಡಿಕೊಂಡಿದ್ದು, ಮತ್ತೆ ಪತಿಯ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಸಹೋದರ ತಿಳಿಸಿದ್ದಾರೆ.

ಮಧ್ಯಾಹ್ನ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯೊಳಗಿನ ಕೋಣೆಯಲ್ಲಿ ಛಾವಣಿಯ ಬಿದಿರಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply