ಮೀನು ಹಿಡಿದುಕೊಂಡು ಬಸ್ ಹತ್ತಬೇಡಿ, ವಾಸನೆ ಬರುತ್ತದೆ ಎಂದು ಎಲ್ಲರೆದುರು ಮಹಿಳೆಗೆ ಅವಮಾನ ಮಾಡಿ ಸರ್ಕಾರಿ ಬಸ್ ನಿಂದ ಕೆಳಗಿಳಿಸಿದ ಕಂಡಕ್ಟರ್ !! | ವೈರಲ್ ಆದ ಈ ಘಟನೆಯ ಬಗ್ಗೆ ಸಿಎಂ ಕೈಗೊಂಡ ಕ್ರಮ ಏನು ಗೊತ್ತಾ??
ಮೀನು ಹಿಡಿದುಕೊಂಡು ಬಸ್ ಹತ್ತಬೇಡಿ ವಾಸನೆ ಬರುತ್ತದೆ ಎಂದು ಸರ್ಕಾರಿ ಬಸ್ ನಿಂದ ಮೀನುಗಾರ ಮಹಿಳೆಯನ್ನು ಕಂಡಕ್ಟರ್ ಇಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ.
ಕನ್ಯಾಕುಮಾರಿಯ ವಾಣಿಯಕುಡಿ ಗ್ರಾಮದ ಸೆಲ್ವಮೇರಿ ಎಂಬುವವರು ನೊಂದ ಮೀನುಗಾರ ಮಹಿಳೆಯಾಗಿದ್ದಾರೆ.ಬಸ್ ನಲ್ಲಾದ ಅವಮಾನದಿಂದ ನೊಂದು ಮಹಿಳೆ ಬಸ್ ನಿಲ್ದಾಣದಲ್ಲಿಯೇ ಜೋರಾಗಿ ಬೊಬ್ಬೆ ಹಾಕಿದ್ದಾರೆ .ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಘಟನೆ ಸಾರಿಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣವೇ ಚಾಲಕ ಮತ್ತು ಕಂಡೆಕ್ಟರ್ ನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಮಹಿಳೆ ಬಸ್ ಗೆ ಹತ್ತಿದ ವೇಳೆ ಕಂಡೆಕ್ಟರ್ ಬಲವಂತವಾಗಿ ಮಹಿಳೆಯನ್ನು ಬಸ್ ನಿಂದ ಕೆಳಗೆ ಇಳಿಸಿದ್ದು, ಬಸ್ ಮೀನಿನಿಂದ ವಾಸನೆ ಬರುತ್ತದೆ ಎಂದು ಅವಮಾನಿಸಿದ್ದಾನೆ. ಎಲ್ಲರ ಎದುರು ಇಂತಹ ಘಟನೆ ನಡೆದಾಗ ಮಹಿಳೆ ತೀವ್ರವಾಗಿ ನೊಂದಿದ್ದು, ಬಸ್ ನಿಲ್ದಾಣದಲ್ಲಿಯೇ ಜೋರಾಗಿ ಅತ್ತಿದ್ದಾರೆ.
ಘಟನೆಯ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯರ ಅಭ್ಯುದಯಕ್ಕಾಗಿ ತಮಿಳುನಾಡು ಸರ್ಕಾರ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿರುವಾಗ, ಇಂತಹದ್ದೊಂದು ಘಟನೆ ನಡೆದಿದೆ. ಕಂಡೆಕ್ಟರ್ ನಡೆಸಿದ ಕೃತ್ಯ ಖಂಡನೀಯ. ಸಮಾಜದಲ್ಲಿ ಎಲ್ಲರೂ ಸಮಾನರು ಎನ್ನುವ ವಿಶಾಲ ಮನೋಭಾವದಿಂದ ನಾವೆಲ್ಲರೂ ಯೋಚಿಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.