ಮೃತ ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ !! | ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಗಾಯ

Share the Article

ಚೆನ್ನೈ: ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಗಳು,ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿರುವ ಘಟನೆ ಮೆಟ್ಟುಪಾಳ್ಯಂ ಬಳಿ ನಡೆದಿದೆ.

ದುರಂತದಲ್ಲಿ ಮಡಿದ ಯೋಧರ ಮೃತದೇಹಗಳನ್ನು ಮದ್ರಾಸ್ ರೆಜಿಮೆಂಟಲ್ ಸೆಂಟರ್ (ಎಂಆರ್‌ಸಿ) ಕುನ್ನೂರಿನ ವೆಲ್ಲಿಂಗ್‌ಟನ್‌ನಿಂದ ಸುಲೂರ್ ಏರ್ ಬೇಸ್‌ಗೆ ಕೊಂಡೊಯ್ಯಲಾಗುತ್ತಿದ್ದಾಗ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್‌ ಅಪಘಾತಕ್ಕೀಡಾಗಿದೆ.

ಈ ದುರಂತದಲ್ಲಿ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗೆ ಗಾಯವಾಗಿದೆ. ಸೂಲೂರು ವಾಯುನೆಲೆಯಿಂದ ಸುಮಾರು 45 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ.ಮೃತದೇಹಗಳನ್ನು ಮತ್ತೊಂದು ಆಂಬ್ಯುಲೆನ್ಸ್‌ಗೆ ವರ್ಗಾಯಿಸಿ, ಸೂಲೂರ್ ಏರ್ ಬೇಸ್‌ಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಯೋಧರ ಪಾರ್ಥಿವ ಶರೀರಗಳನ್ನು ಐಎಎಫ್ ವಿಮಾನದ ಮೂಲಕ ದೆಹಲಿಗೆ ಸಾಗಿಸಲಾಗುತ್ತದೆ.

Leave A Reply