ಗ್ರಾಹಕರಿಗೆ ಸಿಹಿ ಸುದ್ದಿ | LPG ಗ್ಯಾಸ್ ಸಿಲಿಂಡರ್ ತೂಕ ಕಡಿಮೆ ಮಾಡುವ ಸಾಧ್ಯತೆ | ಶೀಘ್ರದಲ್ಲೇ ಸಿಲಿಂಡರ್ ಬೆಲೆ ಇಳಿಕೆ !!
ನವದೆಹಲಿ: ದಿನನಿತ್ಯದ ಅಗತ್ಯಗಳಲ್ಲಿ ಒಂದಾದ ಎಲ್ಪಿಜಿ ಸಿಲಿಂಡರ್ ತೂಕ ಕಡಿಮೆಯಾಗುವ ಸಾಧ್ಯತೆಯಿದ್ದು, ಜೊತೆಗೆ ಬೆಲೆ ಇಳಿಕೆಯೂ ಆಗುವ ಸಾಧ್ಯತೆ ಹೆಚ್ಚಿದೆ.
ಈಗಿರುವ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ಗಳು ಭಾರವಾಗಿದ್ದು, ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು ಕಷ್ಟವಾಗುತ್ತದೆ. ಮುಖ್ಯವಾಗಿ ಮಹಿಳೆಯರು ಗ್ಯಾಸ್ ಸಿಲಿಂಡರ್ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗಲು ತೊಂದರೆಯಾಗುತ್ತದೆ. ಹೀಗಾಗಿ, ಅದಕ್ಕೆ ಪರಿಹಾರವಾಗಿ ಗ್ಯಾಸ್ ಸಿಲಿಂಡರ್ಗಳ ತೂಕವನ್ನೇ ಕಡಿಮೆ ಮಾಡಲು ಕೇಂದ್ರ ಸರ್ಕಾರ ಯೋಚಿಸಿದೆ.
ಎಲ್ಪಿಜಿ ಸಿಲಿಂಡರ್ಗಳು ಭಾರವಾಗಿರುವುದರಿಂದ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಲಾಪದಲ್ಲಿ ರಾಜ್ಯಸಭೆ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ ಅದಕ್ಕೆ ಉತ್ತರ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ, ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸಿಲಿಂಡರ್ನ ಹೆಚ್ಚಿನ ತೂಕವನ್ನು ತಾವೇ ಹೊರುವುದು ನಮಗೆ ಇಷ್ಟವಿಲ್ಲ, ಹಾಗಾಗಿ ಅದರ ತೂಕವನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ’ ಎಂದು ಹೇಳಿದರು. 14.2 ಕೆ.ಜಿ ತೂಕವನ್ನು 5 ಕೆ.ಜಿ.ಗೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜನರ ಅನುಕೂಲಕ್ಕಾಗಿ ಗ್ಯಾಸ್ ಸಿಲಿಂಡರ್ ಹಗುರವಾಗಿರುವುದು ಅವಶ್ಯಕ. ಗ್ಯಾಸ್ ಸಿಲಿಂಡರ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬೇಕಾದರೆ ಕೆಲವೊಮ್ಮೆ ಸಮಸ್ಯೆಯಾಗುತಿದ್ದು,ತೂಕ ಕಡಿಮೆಗಾಗಿ ವಿವಿಧ ಆಯ್ಕೆಗಳನ್ನು ಪರಿಗಣಿಸುತ್ತಿದೆ.ಹೀಗಾಗಿ, ಶೀಘ್ರದಲ್ಲೇ ಸರ್ಕಾರ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.