ಅಪರೂಪವೆಂಬಂತೆ ಶ್ವಾನದ ಭಾಷೆಯನ್ನು ಅರಿತುಕೊಂಡಿದ್ದಾರೆ ಈ ಮಹಿಳೆ | ನಾಯಿಯ ಭಾಷೆಯನ್ನು ಪುಸ್ತಕದ ಮೂಲಕ ಪ್ರಕಟಿಸಲು ಮುಂದಾಗಿದ್ದಾಳಂತೆ !!
ಸಾಮಾನ್ಯವಾಗಿ ಪ್ರಾಣಿ ಪ್ರೇಮಿಗಳ ಸಂಖ್ಯೆ ಹೆಚ್ಚೇ ಇದೆ. ಅವುಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುವವರು ಅದೆಷ್ಟೋ ಮಂದಿ.ನಾಯಿ ಅಂದ್ರೆ ತುಸು ಅಧಿಕವೇ ಪ್ರೀತಿ.ಪ್ರತಿಯೊಂದು ಕಾರ್ಯದಲ್ಲೂ ಜೊತೆಗೆ ಇರಿಸುತ್ತಾರೆ. ಆದ್ರೆ ವಿಷಯ ಏನಪ್ಪಾ ಅಂದ್ರೆ ಇಷ್ಟೆಲ್ಲಾ ತುಂಟಾಟ ಅಲ್ಲದೇ ನಮ್ಮ ಬೇಸರವನ್ನು ಕಡಿಮೆ ಮಾಡೋ ನಾಯಿಯ ಭಾಷೆ ಮಾತ್ರ ನಮಿಗೆ ಅರಿವಾಗದೆ ಹೋಯ್ತಲ್ಲ!!!
ಹೌದು.ನಾಯಿ ಬೊಗಳುವ ಮೂಲಕವೇ ಎಲ್ಲಾ ಸೂಚನೆಯನ್ನು ನೀಡುತ್ತದೆ.ಆದರೆ ಪ್ರಾಣಿ ಭಾಷೆಯನ್ನು ಕೆಲವರು ಮಾತ್ರ ಅರ್ಥ ಮಾಡಬಲ್ಲರು.ಎಲ್ಲರಿಂದ ಪ್ರಾಣಿ ಭಾಷೆಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರಾಣಿಗಳನ್ನು ಯಾರು ಹೆಚ್ಚಾಗಿ ಪ್ರೀತಿಸುತ್ತಾರೋ ಅಂತವರಿಗೆ ಪ್ರಾಣಿಯ ಚಲನವಲನದಿಂದ ಹಿಡಿದು ಎಲ್ಲವೂ ಅರ್ಥವಾಗುತ್ತೆ.
ಹೀಗೆಯೇ ಇಲ್ಲೊಂದು ಮಹಿಳೆಯೊಬ್ಬರು ಶ್ವಾನದ ಭಾಷೆಯನ್ನು ಅರಿತುಕೊಂಡು ಪುಸ್ತಕ ಬರೆದಿದ್ದಾರೆ. ವಾಸ್ತವವಾಗಿ, ಪ್ರಾಣಿಗಳ ಭಾಷೆ ಅರ್ಥವಾಗುವುದಿಲ್ಲ, ಆದರೆ ಪ್ರಾಣಿಗಳ ಸನ್ನೆಗಳು ಮತ್ತು ದೇಹ ಭಾಷೆಯಿಂದ ಅವರ ಅಗತ್ಯತೆಗಳು ಮತ್ತು ಮನಸ್ಥಿತಿಗಳನ್ನು ಊಹಿಸಬಹುದಾಗಿದೆ. ಆದರೆ ಉತ್ತರ ವೇಲ್ಸ್ನಲ್ಲಿ ವಾಸಿಸುವ ಮಹಿಳೆಯೊಬ್ಬಳು ಮನುಷ್ಯರು ಪ್ರಾಣಿಗಳ ಭಾಷೆಯಲ್ಲಿಯೇ ಪ್ರಾಣಿಗಳೊಂದಿಗೆ ಸಂವಹನ ನಡೆಸಬಹುದೆಂದು ಹೇಳಿಕೊಂಡಿದ್ದಾಳೆ.
ನಾರ್ತ್ ವೇಲ್ಸ್ನ 80 ವರ್ಷದ ಸಿಲ್ವಿಯಾ ಇವಾನ್ಸ್ ತನಗೆ ನಾಯಿ ಭಾಷೆ ಅರ್ಥವಾಗಿದೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ನಾಯಿಯೊಂದಿಗೆ ಸಂಪರ್ಕದಲ್ಲಿದ್ದು, ಅದರೊಂದಿಗೆ ಅದರ ಭಾಷೆಯಲ್ಲಿಯೇ ಸಂವಾದ ನಡೆಸುತ್ತಿದ್ದಾರೆ. ಸಿಲ್ವಿಯಾ ಇವಾನ್ಸ್ ಬಳಿ 3 ವರ್ಷದ ಚಿಹೋವಾ ಮತ್ತು ಜ್ಯಾಕ್ ರಸ್ಸೆಲ್ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ.ಸಿಲ್ವಿಯಾ ಇವಾನ್ಸ್ ಹೇಳುವಂತೆ, ಮನೆಯ ನಾಯಿಯ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಇದ್ದವು ಮತ್ತು ಅವುಗಳನ್ನು ಅರ್ಥೈಸಿಕೊಂಡು ಕಾಗದದ ಮೇಲೆ ನಾನು ಬರೆಯಲು ಬಯಸಿದೆ. ಹಾಗಾಗಿ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಯೋಜಿಸಿದ್ದಾರೆ.
ಅನೇಕರು ಸಿಲ್ವಿಯಾ ಅವರ ಮಾತುಗಳನ್ನು ಕೇಳಿ ಇದು ವಿಶ್ವಾಸಾರ್ಹವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ, ಗಂಡನ ಮರಣದ ನಂತರ ನಾಯಿಗಳೇ ತನ್ನ ಮಾನಸಿಕ ಆಸರೆಯಾಗಿದ್ದು, ಅವರೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ ಎನ್ನುತ್ತಾರೆ ಸಿಲ್ವಿಯಾ.