ಬೆಳ್ತಂಗಡಿ: ಮೇಲಂತಬೆಟ್ಟು ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ | ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಬೆಳ್ತಂಗಡಿ :ಪ್ರಥಮ ದರ್ಜೆ ಮೇಲಂತಬೆಟ್ಟು ಕಾಲೇಜಿನಲ್ಲಿ ಮತ್ತೆ ವಿದ್ಯಾರ್ಥಿಗಳ ನಡುವೆ ಗಲಾಟೆ ಆರಂಭವಾಗಿ, ಪೊಲೀಸ್ ಮೆಟ್ಟಿಲೇರಿದ್ದಾರೆ.

 

ನಿನ್ನೆ ಕಾಲೇಜಿನೊಳಗೆ ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿ ಕಾರ್ತಿಕ್ ಎಂಬಾತ ನಡೆದುಕೊಂಡು ಹೋಗುತ್ತಿದ್ದಾಗ ಮೂರನೇ ವರ್ಷದ ಬಿ.ಕಾಂ ವಿದ್ಯಾರ್ಥಿ ಚಂದ್ರ ಎಂಬಾತನಿಗೆ ಸ್ವಲ್ಪ ತಾಗಿದ ವಿಚಾರವಾಗಿ ಕಾರ್ತಿಕ್ ಗೆ ಬೈದಿದ್ದು,ಈ ವಿಚಾರವನ್ನು
ಕಾರ್ತಿಕ್ ಮನೆಯವರಿಗೆ ವಿಚಾರ ತಿಳಿಸಿ ಚಂದ್ರನಿಗೆ ಕರೆ ಮಾಡಿ ಬುದ್ದಿ ಮಾತು ಹೇಳಿದ್ದಾರೆ.

ಇಂದು 11:30 ರ ವೇಳೆಗೆ ಶೌಚಾಲಯದ ಒಳಗಡೆ ಚಂದ್ರನ ನಾಲ್ಕು ಗೆಳೆಯರು,ನೀನು ನಮ್ಮ ಗೆಳೆಯನಿಗೆ ಕರೆ ಮಾಡಿಸುತ್ತಿಯಾ ಎಂದು ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ.ನಂತರ ಈ ವಿಚಾರ ಕಾಲೇಜಿನ ಪ್ರಾಂಶುಪಾಲರಿಗೆ ಕಾರ್ತಿಕ್ ತಿಳಿಸಿದ್ದಾನೆ.ಆದ್ರೆ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ಕಾರ್ತಿಕ್
ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ.

ಸಂಜೆ ಮನೆಮಂದಿ ಕಾಲೇಜಿಗೆ ಬಂದು ಪ್ರಾಂಶುಪಾಲರಿಗೆ ಕೇಳಿದಾಗ ಮನೆಮಂದಿಗೆ ಬೈದು ನೀವು ಯಾರು ಕಾಲೇಜ್ ವಿಚಾರ ಮಾತಾನಾಡಲು ಎಂದು ವಾಪಸು ಕಳುಹಿಸಿದ್ದಾರೆ. ಕಾರ್ತಿಕ್ ಮನೆ ಮಂದಿ ಹಾಗೂ ಗೆಳೆಯರು ಬೆಳ್ತಂಗಡಿ ಪೊಲೀಸ್ ಮೆಟ್ಟಿಲೇರಿದ್ದು
ಈ ವಿಚಾರ ಪ್ರಾಂಶುಪಾಲರಿಗೆ ತಿಳಿಸಿದಾಗ ನಮ್ಮ ಕಾಲೇಜಿಗೆ ಬಂದ ಪೋಷಕರ ಮೇಲೂ ದೂರು ನೀಡುವುದಾಗಿ ತಿಳಿಸಿದ್ದಾರೆ
ಕಾಲೇಜಿನ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು ಎನ್ನಲಾಗಿದೆ ಇನ್ನೂ ಯಾವ ರೀತಿಯಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂದು ಕಾದುನೋಡಬೇಕಾಗಿದೆ.

ಮೇಲಂತಬೆಟ್ಟು ಕಾಲೇಜಿನಲ್ಲಿ ಪ್ರತಿ ಸಲ ಗಲಾಟೆ ನಡೆಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಯಾವುದೇ ಗಲಾಟೆ ಇರಲಿಲ್ಲ.ಈಗ ಮತ್ತೆ ಗಲಾಟೆ ನಡೆಯುವ ಮೂಲಕ ಸುದ್ದಿಯಲ್ಲಿದೆ.

Leave A Reply

Your email address will not be published.