ಟಾಯ್ಲೆಟ್ ಫ್ಲಷ್ ರಿಪೇರಿ ಮಾಡಲು ಬಂದಿದ್ದ ಸಿಬ್ಬಂದಿಗೆ ಕಾದಿತ್ತು ಶಾಕ್ !! | ಫ್ಲಷ್ ನ ಟ್ಯಾಂಕ್ ನಲ್ಲಿತ್ತು ನವಜಾತ ಶಿಶುವಿನ ಮೃತದೇಹ

Share the Article

ಟಾಯ್ಲೆಟ್ ನ ಫ್ಲಷ್‌ನಲ್ಲಿ ನವಜಾತ ಶಿಶುವಿನ ಮೃತದೇಹ ಸಿಕ್ಕಿರುವ ಭಯಾನಕ ಘಟನೆ ತಮಿಳುನಾಡಿನ ತಂಜಾವೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಇಲ್ಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಫ್ಲಷ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರು ಬಂದಿತ್ತು. ಇದನ್ನು ಆಧರಿಸಿ ರಿಪೇರಿ ಮಾಡಲು ಹೋಗಿದ್ದ ಸಿಬ್ಬಂದಿ ಫ್ಲಷ್‌ನ ಟ್ಯಾಂಕ್ ಬಾಗಿಲು ತೆರೆದಾಗ ಅವರಿಗೆ ಶಾಕ್ ಆಗಿದೆ. ಏಕೆಂದರೆ ಅದರಲ್ಲಿ ಆಗತಾನೇ ಹುಟ್ಟಿದ ಮಗುವಿನ ಶವವೊಂದು ಸಿಕ್ಕಿದೆ!

ತೀವ್ರ ನಿಗಾ ಘಟಕದ ಶೌಚಗೃಹದಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ವೈದ್ಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಶವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮಗು ಫ್ಲಷ್ ಟ್ಯಾಂಕ್‌ಗೆ ಬೀಳುವ ಮುನ್ನವೇ ಸತ್ತುಹೋಗಿದೆಯೋ ಅಥವಾ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆಯೋ ಎಂದು ತಿಳಿದುಕೊಳ್ಳಲಾಗುತ್ತಿದೆ.

ಅಲ್ಲಿಯೇ ಇರುವ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯ ಸೆರೆಯಾಗಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.

Leave A Reply