ಒಮಿಕ್ರಾನ್ ವೈರಸ್ ಕುರಿತಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ದಕ್ಷಿಣ ಆಫ್ರಿಕಾ ವಿಜ್ಞಾನಿಗಳು
ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ವೈರಸ್ ಕುರಿತಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಒಮಿಕ್ರಾನ್ ನಿಂದ ಮೂರು ಬಾರಿ ಮರು ಸೋಂಕು ಹರಡುವ ಸಾಧ್ಯತೆ ಇದೆ ಎಂದು ದಕ್ಷಿಣ ಆಫ್ರಿಕಾ ವಿಜ್ಞಾನಿಗಳು ತಿಳಿಸಿದ್ದಾರೆ.
ಒಮಿಕ್ರಾನ್ ಸೋಂಕಿನಿಂದ 3 ಬಾರಿ ಮರು ಸೋಂಕು ಹರಡಲು ಕಾರಣವಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ವಿಜ್ಞಾನಿಗಳ ಅಧ್ಯಯನ ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ 35,670 ಮಂದಿಗೆ ಮರು ಸೋಂಕು ದೃಢಪಟ್ಟಿದೆ. ಕೊರೊನಾ ಬಂದು ಗುಣಮುಖರಾಗಿದ್ದರೂ ಮರು ಸೋಂಕು ದೃಢಪಟ್ಟಿದೆ ಎಂದು ವಿಜ್ಞಾನಿಗಳ ಅಧ್ಯಯನ ಮಾಹಿತಿ ನೀಡಿದೆ.
ಕೊರೊನಾ ಬಂದು ಗುಣಮುಖರಾದವರಿಗೂ 90 ದಿನಗಳ ನಂತರ ಕೊರೊನಾ ಮರು ಸೋಂಕು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಮರು ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ ಎಂದು ಸೆಂಟರ್ ಎಕ್ಸ್ ಲೆನ್ಸ್ ನಿರ್ದೇಶಕ ಜುಲಿಯೆಟ್ ಪುಲಿಯಮ್ ತಿಳಿಸಿದ್ದಾರೆ.