ಮತ್ತೊಮ್ಮೆ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ ರಾಜಧಾನಿ ಬೆಂಗಳೂರು!! ರಾತ್ರಿವೇಳೆ ಕ್ಯಾಬ್ ಏರಿ ಹೊರಟಿದ್ದ ಮಹಿಳೆಯ ಮುಂದೆಯೇ ನಡೆಯಿತು ಹಸ್ತಮೈಥುನ

ರಾಜ್ಯವೇ ನಾಚಿಕೆಪಟ್ಟು ತಲೆತಗ್ಗಿಸುವಂತಹ ಘಟನೆಯೊಂದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ನಡೆದಿದೆ. ಎಲ್ಲಾ ವಿಚಾರದಲ್ಲೂ ಮುಂದಿರುವ ಬೆಂಗಳೂರು ಸದ್ಯ ಕಾಮುಕರ ಅಟ್ಟಹಾಸದಲ್ಲೂ ಮುಂದಿದೆ ಎಂಬುವುದುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ.ಕೆಲಸ ಮುಗಿಸಿ ರಾತ್ರಿ ಮನೆಗೆ ಹೋಗಲು ಓಲಾ ಕ್ಯಾಬ್ ಹತ್ತಿ ಹೊರಟ ಮಹಿಳೆಯೊಬ್ಬರಿಗೆ ಇಲ್ಲಿ ವಿಚಿತ್ರ ಅನುಭವ ಉಂಟಾಗಿದ್ದು, ಅಸಹ್ಯಕರ ಘಟನೆಯಿಂದಾಗಿ ಮಹಿಳೆ ಸದ್ಯ ನ್ಯಾಯದ ಮೊರೆ ಹೋಗಿದ್ದಾರೆ.

ಹೌದು. ಕೆಲಸ ಮುಗಿಸಿ ರಾತ್ರಿ ಕ್ಯಾಬ್ ನಲ್ಲಿ ಮನೆಗೆ ಹೊರಟಿದ್ದ ಪತ್ರಕರ್ತೆ ಅನಿಲ್ ಕುಲಕರ್ಣಿ ಮುಂದೆಯೇ ಕ್ಯಾಬ್ ಚಾಲಕ ಹಸ್ತಮೈಥುನ ನಡೆಸಿಕೊಂಡು ವಿಚಿತ್ರವಾಗಿ ವರ್ತಿಸಿದ್ದಾನೆ. ಈ ವೇಳೆ ಕುಲಕರ್ಣಿ ಕೊಂಚ ಧೈರ್ಯಮಾಡಿ, ಕಿರುಚಿ ಕಾರು ನಿಲ್ಲಿಸಿ ಮತ್ತೊಂದು ಕ್ಯಾಬ್ ನಲ್ಲಿ ಪ್ರಯಾಣಿಸಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಈ ಬಗ್ಗೆ ತನಗಾದ ಅನುಭವವನ್ನು ಮಹಿಳೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಕೂಡಲೇ ಎಚ್ಚೆತ್ತ ಕ್ಯಾಬ್ ಸಂಸ್ಥೆ ಚಾಲಕನನ್ನು ಕೆಲ್ಸದದಿಂದ ಕಿತ್ತೆಸೆದಿದೆ. ಚಾಲಕನ ಬಂಧನಕ್ಕೆ ಪೊಲೀಸ್ ಆಯುಕ್ತರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.