ಅಮಾಸೆಬೈಲಿನ ಕಾಡಿನ ಪೊದೆಯಲ್ಲಿ ಸಿಕ್ಕಿದೆ ಏಳು ದಿನಗಳ ನವಜಾತ ಹೆಣ್ಣು ಶಿಶು | ಹೆಣ್ಣೆಂದು ತಿರಸ್ಕರಿಸಿ ಅಮಾನವೀಯತೆ ಮೆರೆದರೇ ಪೋಷಕರು !!?
ಉಡುಪಿ :ಇತ್ತೀಚೆಗೆ ಪುಟ್ಟ ಕಂದಮ್ಮಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವ ಪ್ರಕರಣದ ಸಂಖ್ಯೆ ಅತಿಯಾಗಿದೆ. ಇದೀಗ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ನವಜಾತ ಶಿಶುವೊಂದನ್ನು ಪೋಷಕರು ಬಿಟ್ಟು ಹೋದ ಅಮಾನುಷ ಘಟನೆ
ನಡೆದಿದೆ.
ಮಹಿಳೆಯೊಬ್ಬರು ಹಾಲಿನ ಡೈರಿಗೆ ಹೋಗುತ್ತಿದ್ದ ವೇಳೆ,ಅಲ್ಲಿಯ ಮಚ್ಚಟ್ಟು ಗ್ರಾಮದ ಸಣ್ಣ ಸೇತುವೆ ಬಳಿ ರಸ್ತೆಯ ಬದಿಯ ಕಾಡಿನ ಪೊದೆಯಲ್ಲಿ ಮಗು ಅಳುವ ದ್ವನಿ ಕೇಳಿಬಂದಿದೆ.ಬಳಿಕ ಅವರು ಹೋಗಿ ಪರೀಕ್ಷಿಸಿದಾಗ ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.
ಈ ಮಗು ಯಾರು ಬಿಟ್ಟು ಹೋಗಿದ್ದಾರೆ? ಯಾರ ಮಗು?ಹೆಣ್ಣೆಂದು ಕಾಡಲ್ಲಿ ಬಿಟ್ಟಿದ್ದಾರೆಯೇ?ಎಂಬುದು ಇನ್ನು ತಿಳಿಯಬೇಕಷ್ಟೆ.ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.