ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ|ಇನ್ನು ಮುಂದೆ ಲಸಿಕೆ ಪಡೆಯದಿದ್ದರೆ ಸರ್ಕಾರಿ ಸೌಲಭ್ಯ ಕಡಿತ!!
ಬೆಂಗಳೂರು:ರೂಪಾಂತರಿ ಕೊರೋನಾ ವೈರಸ್ ಒಮಿಕ್ರಾನ್ ತಡೆಗಾಗಿ ನಿನ್ನೆ ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ತಜ್ಞರ ಸಮಿತಿಯೊಂದು ತನ್ನ ಶಿಫಾರಸ್ಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದರಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯೋದಕ್ಕೆ ಕೊರೋನಾ ಲಸಿಕೆ ಕಡ್ಡಾಯಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ.
ನಿನ್ನೆ ವಿಧಾನಸೌಧದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ತಜ್ಞರ ಸಭೆ ನಡೆದಿದ್ದು,ಈ ಸಭೆಯಲ್ಲಿ ರೂಪಾಂತರಿ ಕೊರೋನಾ ವೈರಸ್ ತಡೆಗೆ ಕೈಗೊಳ್ಳಬಹುದಾದಂತ ಕ್ರಮಗಳ ಕುರಿತಂತೆ ಮಹತ್ವದ ಚರ್ಚೆಯನ್ನು ನಡೆಸಿದೆ.
ಸಚಿವರ ನೇತೃತ್ವದ ಸಭೆಯಲ್ಲಿ ಭಾಗವಹಿಸಿರುವಂತ ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದಂತ ಕ್ರಮಗಳ ಕುರಿತಂತೆ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದು,ಈ ವರದಿಯಲ್ಲಿ ಕೊರೋನಾ ಲಸಿಕೆ ಪಡೆಯದಂತ ಜನರಿಗೆ ಸರ್ಕಾರಿ ಸೌಲಭ್ಯ ಕಡಿತಕ್ಕೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.
ಕೊರೋನಾ ಲಸಿಕೆ ಪಡೆಯೋ ಬಗ್ಗೆ ಜಾಗೃತಿ ಮೂಡಿಸೋ ನಿಟ್ಟಿನಲ್ಲಿ, ಲಸಿಕೆ ಪಡೆಯಲು ನಿರಾಕರಿಸುತ್ತಿರೋರು, ಹಿಂಜರಿಯುತ್ತಿರೋರಿಗೆ ಲಸಿಕೆ ಹಾಕಿಸಿಕೊಳ್ಳೋದಕ್ಕೆ ಕ್ರಮ ಕೈಗೊಳ್ಳೋ ನಿಟ್ಟಿನಲ್ಲಿ ಸರ್ಕಾರಿ ಸೌಲಭ್ಯಗಳಾದಂತ ಪಡಿತರ ಹಂಚಿಕೆ, ವಿದ್ಯುತ್, ನೀರು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಸಂಬಳ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.ಒಂದು ವೇಳೆ ಈ ಶಿಫಾರಸ್ಸಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ರೇ. ಸರ್ಕಾರಿ ಸೌಲಭ್ಯಕ್ಕೆ ವ್ಯಾಕ್ಸಿನ್ ಪಡೆಯೋದು ಕಡ್ಡಾಯವಾಗಲಿದೆ. ಅಲ್ಲದೇ ಇನ್ಮುಂದೆ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯಗಳು ಕಡಿತಗೊಳ್ಳಲಿವೆ.
ಈ ಮೂಲಕ ರಾಜ್ಯದಲ್ಲಿ ಕೊರೋನಾ ಲಸಿಕೆ ಪಡೆಯದಂತ ಜನರಿಗೆ ಸರ್ಕಾರಿ ಸೌಲಭ್ಯಗಳು ಕಟ್ ಎಂದೇ ಹೇಳಲಾಗುತ್ತಿದೆ.