ಪುತ್ತೂರು : ದೈವಗಳ ಮಧ್ಯಸ್ಥ ಭರತ್ ಭಂಡಾರಿ ಬನ್ನೂರು ಇನ್ನಿಲ್ಲ
ಪುತ್ತೂರು: ಪುತ್ತೂರಿನ ಬನ್ನೂರು ನಿವಾಸಿ ದೈವಗಳ ಮಧ್ಯಸ್ಥ ಭರತ್ ಭಂಡಾರಿ(31) ಅಲ್ಪ ಕಾಲದ ಅನಾರೋಗ್ಯ ಸಮಸ್ಯೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೊದಲಿಗೆ ಜ್ವರ ಕಾಣಿಸಿಕೊಂಡು ಬಳಿಕ ಅದು ಜಾಂಡಿಸ್ ಹಂತ ತಲುಪಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು.
ಜಾಂಡಿಸ್ ಖಾಯಿಲೆ ತೀವ್ರಗೊಂಡು ಅವರ ಪಿತ್ತಕೋಶ (ಲೀವರ್) ಸಂಪೂರ್ಣ ಕೆಟ್ಟು ಹೋಗಿತ್ತು. ಇದರಿಂದ ಸುಮಾರು 120 kg ತೂಕದ ದೃಢ ಶರೀರದ ಭರತ್ ಅವರು 40 kgಗೆ ಇಳಿದು ಕೃಶರಾಗಿದ್ದರು. ದೇಹ ಸ್ಥಿತಿ ಕ್ಷಿಣವಾಗುತ್ತಿದ್ದು ಲೀವರ್ ಮರು ಜೋಡಣೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಅದಕ್ಕಾಗಿ ಅವರ ಅಭಿಮಾನಿಗಳು ಹಿತೈಷಿಗಳು ಚಿಕಿತ್ಸೆಯ ವೆಚ್ಚಕ್ಕಾಗಿ ಹಣ ಸಂಗ್ರಹ ಮಾಡಲು ಮನ ಮಾಡಿದ್ದರು. ಆದರೆ ವಿಧಿಯ ಮುಂದೆ ಯಾವುದೂ ಇಲ್ಲ ಎನ್ನುವಂತೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್
ಮೃತರ ತಂದೆ ಗಂಗಾಧರ ಭಂಡಾರಿ ಯಕ್ಷಗಾನ ಕಲಾವಿದರಾಗಿದ್ದರು. ಮೃತರು ತಂದೆ ಗಂಗಾಧರ ಭಂಡಾರಿ, ತಾಯಿ ಪುಷ್ಪ, ಸಹೋದರಿ ಅಕ್ಷತಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.