ಬೆಳ್ತಂಗಡಿ : ನದಿಯಲ್ಲಿ ಮುಳುಗಿ ಯುವಕ ಸಾವು

Share the Article

ಬೆಳ್ತಂಗಡಿ: ನದಿಯಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ನಡ ಗ್ರಾಮದ ಚಂದ್ಕೂರು ಸಮೀಪದ ಸೋಮಾವತಿ ನದಿಯಲ್ಲಿ ಮೂರು ಮಂದಿ ಯುವಕರು ಸ್ನಾನಕ್ಕೆ ತೆರಳಿದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಯುವಕನೊಬ್ಬ ಮುಳುಗಿ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮೃತ ಯುವಕನನ್ನು ಕಾಶಿಬೆಟ್ಟು ಎಂಬಲ್ಲಿಯ ಇಸ್ಮಾಯಿಲ್ ಎಂಬವರ ಪುತ್ರ ನಬಾನ್ (18) ಎಂದು ತಿಳಿದು ಬಂದಿದೆ.

Leave A Reply