ಮೇಘಾಲಯ:ರಾತ್ರಿ ಬೆಳಗಾಗುವುದರೊಳಗೆ ಕಾಂಗ್ರೆಸ್ ಗೆ ಬಿಗ್ ಶಾಕ್!! |ಮುಖ್ಯಮಂತ್ರಿ ಸಹಿತ 11 ಮಂದಿ ಘಟಾನುಘಟಿ ನಾಯಕರು ಪಕ್ಷದಿಂದ ಲೆಫ್ಟ್
ಮೇಘಾಲಯದಲ್ಲಿ ತಡರಾತ್ರಿ ಮಾಜಿ ಮುಖ್ಯಮಂತ್ರಿ ಕುಕುಲ್ ರಂಗಾ ಸೇರಿದಂತೆ 11 ಮಂದಿ ಕಾಂಗ್ರೆಸ್ ನಾಯಕರುಗಳು ತೃಣಮೂಲ ಕಾಂಗ್ರೆಸ್ ಪಾರ್ಟಿಯನ್ನು ಸೇರಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.
ಮಾಜಿ ಸಿಎಂ ಮುಕುಲ್ ಸಂಗ್ಯಾ ಮತ್ತು ಪಕ್ಷ ರಾಜ್ಯಾಧ್ಯಕ್ಷ ವಿನ್ಸೆಂಟ್ ಎಚ್ ಪಾಲಾ ಅವರು ಮುಂದಿಟ್ಟ ಬೇಡಿಕೆ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಘಾಲಯಕ್ಕೆ ಭೇಟಿ ನೀಡಿದ ತಿಂಗಳ ಜೊತೆಗೇ ಒಟ್ಟು 17 ಶಾಸಕರಲ್ಲಿ 12 ಮಂದಿ ತೃಣಮೂಲ ಕಾಂಗ್ರೆಸ್ ಸೇರಿದ ಘಟನೆ ಜರುಗಿರುವುದು ಕಾಂಗ್ರೆಸ್ಗೆ ಬಲವಾದ ಪೆಟ್ಟು ಬಿದ್ದಂತಾಗಿದೆ.
ಮಾಜಿ ಸಿಎಂ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಕುಲ್ ಎಂ ಸಂಗ್ಯಾ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ವಿನ್ಸೆಂಟ್ ಹೆಚ್ ಪಾಲಾ ಅವರು ಮೇಘಾಲಯ ಘಟಕದ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಾಗಿನಿಂದ ಅವರು ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಪಾಲಾ ನೇಮಕ ಮಾಡುವ ಬಗ್ಗೆ ಪಕ್ಷದ ನಾಯಕರು ನಮ್ಮ ನಡುವೆ ಸಮಾಲೋಚನೆ ನಡೆಸಿಲ್ಲ ಎಂದು ಸಂಗ್ರಾ ಹಿಂದೆಯೇ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸಂಸ್ಮಾ ಅವರು ತೃಣಮೂಲ ಕಾಂಗ್ರೆಸ್ಗೆ ಪಕ್ಷಾಂತರ ಮಾಡಬಹುದು ಎಂಬ ಊಹಾಪೋಹವಿತ್ತು. ಆದಾಗ್ಯೂ, ಉಭಯ ನಾಯಕರು ಕಳೆದ ಶನಿವಾರ ಮುಂಬರುವ ಉಪಚುನಾವಣೆಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು.
ಇದರ ನಡುವೆ ಟಿಎಂಸಿ ಪರವಾಗಿ ಪ್ರಶಾಂತ್ ಕಿಶೋರ್ ಅವರ ತಂಡದ ಸದಸ್ಯರು ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿದ್ದು, ಸಂಗ್ಯಾ ಟಿಎಂಸಿ ಪ್ರಸ್ತಾಪದ ಬಗ್ಗೆ ಆರಂಭದಲ್ಲಿ ಮನಸಿರಲಿಲ್ಲ. ಆದರೆ, ಇದೀಗ ತಕ್ಷಣದ ಬೆಳವಣಿಗೆಯಲ್ಲಿ ಟಿಎಂಸಿ ಕಡೆ ಹೆಜ್ಜೆ ಹಾಕಿದ್ದಾರೆ. ಇನ್ನೊಂದು ಕಡೆ ಪಕ್ಷವನ್ನು ವಿಸ್ತರಣೆ ಮಾಡುವ ಹುಮ್ಮಸ್ಸಿನಲ್ಲಿದ್ದ ಟಿಎಂಸಿ ಇದೀಗ ಮೇಘಾಲಯದಲ್ಲಿ ಕಾಂಗ್ರೆಸ್ಗೆ ಬಹು ದೊಡ್ಡ ಶಾಕ್ ನೀಡಿದೆ.