ಭಾರತೀಯ ಆಟಗಾರರಿಗೆ ‘ಹಲಾಲ್’ ಮಾಂಸಾಹಾರ ಮಾತ್ರ ನೀಡಲು ಬಿಸಿಸಿಐ ತಾಕೀತು | ಹಿಂದೂ, ಸಿಖ್ ಧಾರ್ಮಿಕ ಭಾವನೆಗಳ ಜೊತೆ ಆಟವಾಡುತ್ತಿರುವ ಬಿಸಿಸಿಐ !!
ಭಾರತ ಕ್ರಿಕೆಟ್ ತಂಡ ಬಲು ಬಲಿಷ್ಠವಾದ ಕ್ರಿಕೆಟ್ ತಂಡಗಳಲ್ಲೊಂದು. ಟೀಂ ಇಂಡಿಯಾ ರೂಪಿಸಿಕೊಂಡಿರುವ ಫಿಟ್ನೆಸ್ ಪರೀಕ್ಷೆಯನ್ನು ಆಟಗಾರ ಪಾಸ್ ಆದರೆ ಮಾತ್ರ ಆತ ತಂಡವನ್ನು ಸೇರಿಕೊಳ್ಳಲು ಸಾಧ್ಯ. ಹೀಗೆ ಫಿಟ್ನೆಸ್ ಪರೀಕ್ಷೆ ಜೊತೆಗೆ ಪ್ರತಿಯೊಬ್ಬ ಆಟಗಾರನು ಬಿಸಿಸಿಐ ರೂಪಿಸಿರುವ ಡಯಟ್ ಪ್ಲ್ಯಾನ್ ಪಾಲಿಸಬೇಕು. ಸದ್ಯ ಈ ಡಯಟ್ ಪ್ಲಾನ್ಗೆ ಸೇರಿರುವ ಆಹಾರದ ವಿಚಾರವು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೌದು, ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ‘ಹಲಾಲ್’ ಮಾಂಸಹಾರವನ್ನು ನೀಡಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಿಫಾರಸ್ಸು ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬಿಸಿಸಿಐ ಆಟಗಾರರ ಡಯಟ್ ಪ್ಲಾನ್ನಲ್ಲಿ ಹಲಾಲ್ ಮಾಂಸ ಪದ್ಧತಿಯನ್ನು ಸೇರಿಸಿದೆ. ಮುಂಬರುವ ಐಸಿಸಿ ಟೂರ್ನಿಗಳು ನಿರ್ಣಾಯಕವಾಗಿರುವ ಕಾರಣ, ಆಟಗಾರರನ್ನು ಫಿಟ್ ಆಗಿಡಲು ಡಯಟ್ ಪ್ಲಾನ್ ಅನಿವಾರ್ಯ. ಹಾಗಾಗಿ, ಪೋರ್ಕ್ ಮತ್ತು ಬೀಫ್ ಯಾವುದನ್ನೂ ಸೇವಿಸುವಂತಿಲ್ಲ ಎಂದು ಬಿಸಿಸಿಐ ತಾಕೀತು ಮಾಡಿದೆ. ಆದರೆ, ಬಿಸಿಸಿಐನ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ.
ಹಲಾಲ್ ಮಾಂಸ ಎಂದರೇನು?
ಹಲಾಲ್ ಮಾಂಸ ಎಂದರೆ ಕುರಿ ಕೋಳಿ ಇನ್ನಿತರ ಪ್ರಾಣಿಗಳ ಕತ್ತು ಕುಯ್ಯುವ ಮೂಲಕ ಅದರ ರಕ್ತನಾಳಗಳನ್ನು ಕತ್ತರಿಸಿ ಸಂಪೂರ್ಣ ರಕ್ತ ಹರಿದ ಬಳಿಕ ಮಾಂಸ ಮಾಡಲಾಗುತ್ತದೆ. ಇದನ್ನು ಹಲಾಲ್ ಮಾಂಸ ತಯಾರಿ ಎನ್ನಲಾಗುತ್ತದೆ.
ಸಾಮಾನ್ಯವಾಗಿ ಕ್ರಿಕೆಟಿಗರ ಆಹಾರದ ಪಟ್ಟಿಯಲ್ಲಿ ಕೋಳಿ ಮತ್ತು ಆಡಿನ ಮಾಂಸದ ಖಾದ್ಯಗಳಿರುವುದು ವಾಡಿಕೆ. ಹುರಿದ ಚಿಕನ್, ಲ್ಯಾಂಬ್ ಚಾಪ್ಸ್, ಗ್ರಿಲ್ ಚಿಕನ್, ಗೋವನ್ ಫಿಶ್ ಕರಿ, ತಂಗಡಿ ಕಬಾಬ್, ಚಿಕನ್ ಗಾರ್ಲಿಕ್ ಸಾಸ್ ಮತ್ತು ವೆಜಿಟೇಬಲ್ ಪದಾರ್ಥಗಳನ್ನು ನೀಡಲಾಗುತ್ತಿದೆ.
ಟೀಂ ಇಂಡಿಯಾ ಸರ್ವಧರ್ಮೀಯ ತಂಡ. ಹಿಂದೂ, ಸಿಖ್ ಧರ್ಮದಲ್ಲಿ ಹಲಾಲ್ ಮಾಂಸ ಸೇವನೆ ನಿಷೇಧವಿದೆ. ಮುಸ್ಲಿಂ ಆಟಗಾರರಿಗೆ ಮಾತ್ರ ಹಲಾಲ್ ಮಾಂಸ ಸೇವನೆಗೆ ಅವಕಾಶ ಇದೆ. ಅವರು ಹಲಾಲ್ ಮಾಂಸ ಹೊರತುಪಡಿಸಿ ಬೇರೆ ಯಾವುದೇ ಮಾಂಸ ಸೇವಿಸುವುದಿಲ್ಲ. ಆದರೆ, ಬಿಸಿಸಿಐ ಯಾಕೆ ಇಂತಹ ನಿರ್ಧಾರ ಮಾಡಿದೆ? ಬಿಸಿಸಿಐ ಹಲಾಲ್ಗೆ ಉತ್ತೇಜನ ಕೊಡುತ್ತಿದ್ದೆಯೇ? ಸರ್ವಧರ್ಮೀಯರಿರುವ ಟೀಂ ಇಂಡಿಯಾದಲ್ಲಿ ಇದೆಂತಹ ಪದ್ಧತಿ ಅಂತ ನೆಟ್ಟಿಗರು ಮುಗಿಬಿದ್ದಿದ್ದಾರೆ.
ಅದಲ್ಲದೆ ಬಿಜೆಪಿ ವಕ್ತಾರ ಮತ್ತು ವಕೀಲ ಗೌರವ್ ಗೋಯಲ್ ಆಕ್ಷೇಪ ಎತ್ತಿದ್ದಾರೆ. ಬಿಸಿಸಿಐ ಈ ನಿಯಮವನ್ನು ತಕ್ಷಣ ಹಿಂಪಡೆಯಬೇಕು. ಆಟಗಾರರಿಗೆ ತಮಗೆ ಇಷ್ಟವಿರುವ ಆಹಾರವನ್ನು ತಿನ್ನುವ ಹಕ್ಕಿದೆ. ಕೇವಲ ಹಲಾಲ್ ಮಾಂಸ ನೀಡಬೇಕು ಎಂದು ಕಡ್ಡಾಯ ಮಾಡಲು ಬಿಸಿಸಿಐ ಯಾರು? ಇದು ನಿಯಮಬಾಹಿರ ಎಂದು ಬಿಸಿಸಿಐ ವಿರುದ್ಧ ಗುಡುಗಿದ್ದಾರೆ.