ಮುದಿತನಕ್ಕೆ ಕಾಲಿಟ್ಟರೂ ಕೆಲಸ ಬಿಡದ ಮುದಿ ಜೀವ|ತನ್ನ ಅಂತ್ಯಸಂಸ್ಕಾರಕ್ಕೆಂದು ಕೂಡಿಟ್ಟ ಲಕ್ಷ ರೂಪಾಯಿ ಪಾಪಿಯಿಂದ ಕಳ್ಳತನ|ನಗುವ ಮೊಗದೊಳಗೆ ಅಳಲನ್ನು ಬೆಚ್ಚಗೆ ಮುಚ್ಚಿಟ್ಟ ಅಜ್ಜನ ಸ್ಟೋರಿ!
ಅದೆಷ್ಟೋ ಮುದಿ ಜೀವಗಳು ಇಂದಿಗೂ ತನ್ನ ಕಾಲಮೇಲೆ ತಾನೇ ನಿಲ್ಲಲು ಬಯಸುತ್ತಾರೆ.ತಮ್ಮ ಕೈಯಾರೇ ದುಡಿದು ಜೀವನ ಸಾಗಿಸುತ್ತಾರೆ.ಇತರರ ಹಂಗಿಗೆ ಬೀಳದೆ ತಮ್ಮ ಕಷ್ಟಗಳಿಗೆ ತಾವೇ ಹೊಣೆಯಾಗುತ್ತಾರೆ.ಕೆಲವೊಂದು ಬಾರಿ ದೇವರು ಕೂಡ ಕೈ ಹಿಡಿಯುವಿದಿಲ್ಲ ನೋಡಿ!
ಹೌದು. ಇಲ್ಲಿ ಫೋಟೋದಲ್ಲಿ ಕಾಣಸಿಗುವಂತೆ ಮುಗುಳ್ನಗುತ್ತಾ ತನ್ನೆಲ್ಲಾ ನೋವನ್ನು ಮರೆತು ಕೂತಿದ್ದಾರೆ ನೋಡಿ. ಆದರೆ ಅವರ ನಗುವಿನ ಹಿಂದೆ ಇರುವುದು ಖುಷಿಯ ಹೊರತು,ಬೇಜಾರು.ಅಷ್ಟಕ್ಕೂ ಈ ಅಜ್ಜನ ಅಳಲಿಗೆ ಕಾರಣ ಗೊತ್ತಾದ್ರೆ ನಮ್ಮ ಕಣ್ಣಂಚಲ್ಲೂ ನೀರು ಬರುವುದು ಸಾಮಾನ್ಯ.ಇವರ ಪಾಡು ನೀವೊಮ್ಮೆ ಕೇಳಲೇ ಬೇಕು.
ಈ ಅಜ್ಜ ಮುದಿತನಕ್ಕೆ ಕಾಲಿಟ್ಟರೂ,ಕೆಲಸ ಬಿಡಲಿಲ್ಲ. ಪಲ್ಲಿ ರಸ್ತೆ ಬದಿಯಲ್ಲಿ ಕುಳಿತು ಕಡಲೆಕಾಯಿ ಮಾರುತ್ತಿದ್ದಾರೆ.ಇದುವರೆಗೆ ಕಡಲೆಕಾಯಿಯನ್ನು ಮಾರಾಟ ಮಾಡಿ ಸುಮಾರು ಒಂದು ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಅವರು ಸತ್ತಾಗ ಅಂತ್ಯಕ್ರಿಯೆಯಲ್ಲಿ ಅವರು ಹಂಬಲಿಸುತ್ತಿದ್ದ ಈ ಮೊತ್ತವನ್ನು ಯಾರೋ ಮರೆಮಾಡಿದರು.ಬಡ ಅಜ್ಜ ಗಳಿಸಿದ ಮೊತ್ತವೂ ಕಳ್ಳತನವಾಯಿತು.ಅದು ಯಾವ ಪಾಪಿಯ ಕಣ್ಣು ಈ ಕಷ್ಟ ಪಟ್ಟ ಹಣದ ಮೇಲೆ ಬಿತ್ತೋ ಏನು?ಆದ್ರೆ ಈ ಅಜ್ಜನ ಮನಸ್ಸು ಮಾತ್ರ ಕಲ್ಲಾಗಿಸಿತು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀದಿದ್ದು,ಈ ವಿಷಯ ಹಿರಿಯ ಅಧಿಕಾರಿಯೊಬ್ಬರಿಗೆ ತಿಳಿದು ಮುದುಕನ ಕಷ್ಟ ಅವರನ್ನು ಕರಗಿಸಿತು. ಅದರೊಂದಿಗೆ ಅಜ್ಜ ಕಳೆದುಹೋದ ಲಕ್ಷ ರೂಪಾಯಿಯನ್ನು ತಂದು ಕೊಟ್ಟರು.ಪೊಲೀಸ್ ನ ಒಳ್ಳೆಯ ಮನಸ್ಸಿಗೆ ಜನ ಕೊಂಡಾಡುತ್ತಿದ್ದಾರೆ.