ಮನೆಯಲ್ಲಿ ನಾಯಿಗಳ ಒಂಟಿತನ ಕಡಿಮೆ ಮಾಡಲು ಬರುತ್ತಿದೆ ಹೊಸ ಸಾಧನ|ಸಾಕು ಪ್ರಾಣಿ ಮತ್ತು ಅದರ ಮಾಲೀಕರ ನಡುವಿನ ತುರ್ತು ಸಂವಹನಕ್ಕಾಗಿಯೇ ತಯಾರಾಗಿದೆ ಸಾಧನ|ಇದುವೇ ಡಾಗ್ ಫೋನ್!!
ಪ್ರತಿಯೊಬ್ಬ ಮನುಷ್ಯನಿಗೂ ಚಿಂತೆ, ಬೇಜಾರು, ಏಕಾಂತ ಇದ್ದೇ ಇರುತ್ತದೆ. ಆದರೆ ನಮ್ಮೆಲ್ಲರ ಒಂದು ಬಾರಿಯ ಮನ ಶಾಂತಿಗೆ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಎಂಬ ಜಾಲತಾಣಗಳು ಇವೆ.ಇನ್ನೊಬ್ಬರಿಗೆ ಕಾಲ್ ಅಥವಾ ವಿಡಿಯೋ ಕಾಲ್ ಮಾಡುವ ಮೂಲಕ,ಮನೋರಂಜನೆಗಳಿಂದ ಒಮ್ಮೆಗೆ ಮುಗುಳ್ನಗಬಹುದು. ಆದ್ರೆ ನಮ್ಮಂತೆಯೇ ಪ್ರಾಣಿಗಳು ಕೂಡ ಜೀವಿಗಳೇ ಅಲ್ಲವೇ? ಅವುಗಳಿಗೂ ಆತಂಕ ಇರುತ್ತದೆ ಅಲ್ಲವೇ? ಹಾಗಿದ್ದ ಮೇಲೆ ಅವುಗಳ ಈ ಸಮಸ್ಯೆಗೆ ಪರಿಹಾರ ಇಲ್ಲವೇ!!
ಅದೆಷ್ಟೋ ಮನೆ ಮಾಲಿಕರು ಕೇವಲ ನಾಯಿಯೊಂದನ್ನೇ ಬಿಟ್ಟು ಊರೆಲ್ಲ ಸುತ್ತಿ ಬರುತ್ತಾರೆ. ಆಗ ನಾಯಿಗು ಏಕಾಂತದ ಅನುಭವ ಆಗುತ್ತದೆ.ಹೌದು, ನಾಯಿಗಳು ಕೂಡ ಆತಂಕಕ್ಕೆ ಒಳಗಾಗಬಹುದು. ನಾಯಿಗಳ ಆತಂಕದ ಮಟ್ಟವು ಅವುಗಳ ಒಟ್ಟಾರೆ ಬದುಕಿನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. 2020ರ ಮಾರ್ಚ್ ನಲ್ಲಿ ಪ್ರಕಟವಾದ ವೈಜ್ಞಾನಿಕ ವರದಿಯಲ್ಲಿ, ಸುಮಾರು ಶೇಕಡಾ 70ರಷ್ಟು ನಾಯಿಗಳು ಆತಂಕದ ರೀತಿಯ ವರ್ತನೆಯನ್ನು ಪ್ರದರ್ಶಿಸುತ್ತವೆ ಎಂಬುವುದನ್ನು ಸಂಶೋಧಕರು ತಿಳಿಸಿದ್ದಾರೆ.
ಇದೀಗ ಮನೆಯಲ್ಲಿ ನಾಯಿಗಳ ಒಂಟಿತನ ಕಡಿಮೆ ಮಾಡಲು ಸಾಧನವೊಂದನ್ನು ತಯಾರಿಸಲಾಗಿದ್ದು,ಅದುವೇ ಡಾಗ್ ಫೋನ್.ಡಾಗ್ ಫೋನ್ ಒಂದು ವಿಶಿಷ್ಟ ಸಾಧನವಾಗಿದ್ದು, ಬ್ರಿಟನ್ ಮತ್ತು ಫಿನ್‍ಲ್ಯಾಂಡ್‍ನ ಪ್ರಾಣಿ ತಂತ್ರಜ್ಞಾನ ವಿಜ್ಞಾನಿಗಳು, ಸಾಕು ಪ್ರಾಣಿ ಮತ್ತು ಅದರ ಮಾಲೀಕರ ನಡುವೆ ತುರ್ತು ಸಂವಹನಕ್ಕಾಗಿ ಈ ಸಾಧನ ಕಂಡು ಹಿಡಿದಿದ್ದಾರೆ. ಅಕ್ಸೆಲೆರೋಮಿಟರ್ ಅಳವಡಿಸಲಾಗಿರುವ ಚೆಂಡನ್ನು ಸಾಕು ಪ್ರಾಣಿ ಎತ್ತಿಕೊಂಡು ಅಲ್ಲಾಡಿಸಿದಾಗ, ಅದು ಕಾರ್ಯ ನಿರ್ವಹಿಸಲು ಅರಂಭಿಸುತ್ತದೆ ಎಂದು ಎಎಫ್‍ಪಿ ವರದಿ ಮಾಡಿದೆ.
ಅಕ್ಸೆಲೆರೋಮೀಟರ್ ಚಲನೆಯನ್ನು ಗ್ರಹಿಸಿದಾಗ, ಮಾಲೀಕರ ಸಾಧನಕ್ಕೆ ವಿಡಿಯೋ ಕರೆ ಮಾಡುವಂತೆ, ಹತ್ತಿರ ಇರುವ ಇನ್ನೊಂದು ಸಾಧನವನ್ನು ಪ್ರಚೋದಿಸುತ್ತದೆ. ಇಂತಹ ಸಾಧನವನ್ನು ಇದೇ ಮೊದಲ ಬಾರಿಗೆ ಕಂಡು ಹಿಡಿಯಲಾಗಿದೆ ಎಂದು ನಂಬಲಾಗುತ್ತಿದ್ದು, ಗ್ಲಾಸ್ಗೊ ಇಲ್ಯೆನಾ ಹಿಸ್ರ್ಕಿಜ್ ಅವರು , ಫಿನ್‍ಲ್ಯಾಂಡ್‍ನ ಆಲ್ಟೋ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೊಗಿಗಳ ಸಹಾಯದಿಂದ ಈ ಸಾಧನ ಕಂಡು ಹಿಡಿದಿದ್ದಾರೆ.ಅದು ಆಕೆಯ ಲ್ಯಾಬ್ರಡರ್ ಮತ್ತು “ಲ್ಯಾಬ್ ಅಸಿಸ್ಟೆಂಟ್” ಜ್ಯಾಕ್‍ನಿಂದ ಪ್ರಮುಖ ಮಾಹಿತಿ ಹೊಂದಿತ್ತು. ಹಿಸ್ರ್ಕಿಜ್-ಡೊಗ್ಲಸ್ ಅವರು ಒಂದು ಚೆಂಡನ್ನು ಬಳಸಿಕೊಂಡು ಕರೆ ಮಾಡುವುದು ಹೇಗೆ ಎಂಬುವುದನ್ನು ಮೊದಲು ತೋರಿಸಿಕೊಟ್ಟರು.ಹಾಗೂ ಆ ಬಳಿಕ 16 ದಿನಗಳವರೆಗೆ ಆಟವಾಡಲು ಆ ಆಟಿಕೆ ನೀಡಲಾಯಿತು.
ಹಿಸ್ರ್ಕಿಜ್-ಡೊಗ್ಲಸ್ ಹಲವಾರು ಆಕಸ್ಮಿಕ ಕರೆಗಳನ್ನು ಸ್ವೀಕರಿಸಿದರೂ, ಲ್ಯಾಬ್ರಡಾರ್‌ನಿಂದ ತನ್ನ ಮಾಲೀಕರನ್ನು ಯಶಸ್ವಿಯಾಗಿ ಸಂಪರ್ಕಿಸಲು ಮೂಲ ಮಾದರಿಯ ಸಾಧನ ಬಳಸಲು ಸಾಧ್ಯವಾಯಿತು. ಡಾಗ್ ಫೋನ್‍ನೊಂದಿಗೆ ಜ್ಯಾಕ್‍ನ ಸಂವಾದಗಳಿಗೆ ಸಂಬಂಧಿಸಿದ ಫಲಿತಾಂಶಗಳ ಬಗ್ಗೆ ಇನ್ನೂ ವಿಶ್ಲೇಷಣೆ ನಡೆಯುತ್ತಿದೆ ಮತ್ತು ಅದನ್ನು ಹೆಚ್ಚಿನ ಪ್ರಯೋಗಗಳಿಗೆ ಒಳಪಡಿಸಲಾಗುತ್ತಿದೆ. ಇದರ ಫಲಿತಾಂಶವು, ಫೋಲ್ಯಾಂಡ್‍ನ 2021ರ ಎಸಿಎಂ ಇಂಟರ್ ಆಯಕ್ಟೀವ್ ಸ್ಪೇಸ್ ಮತ್ತು ಸರ್ಫೇಸ್‌ಗಳ ಸಮ್ಮೇಳನದಲ್ಲಿ ಹೊಸ ಸಂಶೋಧನಾ ಪ್ರಬಂಧದ ಕೇಂದ್ರಬಿಂದು ಆಗಿತ್ತು.