ಸತ್ತು ಬಿದ್ದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳಿಸುತ್ತಿರುವ ತಾಯಿ ಆನೆ|ತನ್ನ ಕಾಲುಗಳಲ್ಲಿ ದೂಡುತ್ತಾ’ಎದ್ದೇಳು-ಎದ್ದೇಳು’ಎಂದು ಅಳುತ್ತಿರುವ ಆನೆ

Share the Article

ತನ್ನ ಮಗು ಏನೇ ಕೆಟ್ಟದು ಮಾಡಿದರೂ ಆಕೆಗೆ ಮಾತ್ರ ತನ್ನ ಮಗುವೇ ಎಲ್ಲಾ. ಕರುಳು ಬಳ್ಳಿ ಸಂಬಂಧ ಅನ್ನೋದೆ ಇದಕ್ಕೆ,ಇವರಿಬ್ಬರ ಸಂಬಂಧ ಮಾತ್ರ ಬಿಡಿಸಲಾರದ ಕೊಂಡಿ. ಈ ಸಂಬಂಧ ಮಾನವ ಕುಲಕ್ಕೆ ಮಾತ್ರ ಸೀಮಿತವಾಗದೆ ಪ್ರಾಣಿ-ಪಕ್ಷಿಗಳಲ್ಲೂ ಇವೆ. ಇದೇ ರೀತಿ ಆನೆ ಮತ್ತು ಮರಿಯ ಹೃದಯ ಮಿಡಿಯುವ ವಿಡಿಯೋ ಒಂದು ವೈರಲ್ ಆಗಿದ್ದು ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೋಡುವಂತೆ, ತಾಯಿ ಆನೆಯೊಂದು ಸಾವಿಗೀಡಾದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳು ಎಂದು ಎಬ್ಬಿಸುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಸಾಕಷ್ಟು ವಿಡಿಯೊಗಳು ತಮಾಷೆಯಾಗಿದ್ದರೂ, ಈ ವಿಡಿಯೋ ಮಾತ್ರ ನೋಡಿದಾಕ್ಷಣ ಮನಕಲಕುವಂತಿದೆ.

ತನ್ನ ಮಗು ಸುಮ್ಮನೆ ಮಲಗಿದ್ದನ್ನು ನೋಡಲಾರದೆ ತಾಯಿ ಆನೆ ದುಃಖ ತಡೆಯಲಾರದೆ,ತನ್ನ ಕಾಲುಗಳಲ್ಲಿ ದೂಡುತ್ತಾ ತನ್ನ ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಾ ಎದ್ದೇಳು ಅನ್ನುತ್ತಿದೆ. ತನ್ನ ಸೊಂಡಿಲಿನಿಂದ ಮರಿಯ ದೇಹವನ್ನು ಮುಟ್ಟುತ್ತಿದೆ.ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಘಟನೆಯಿದಾಗಿದ್ದು,ಆನೆ ಮರಿಯೊಂದು ವಿದ್ಯುತ್ ಸ್ಪರ್ಶ ತಗುಲಿ ಸಾವಿಗೀಡಾಗಿದೆ.ಅಂತೂ ಈ ವಿಡಿಯೋ ನೋಡುವಾಗ ಹೃದಯ ಕಲ್ಲಾಗದೆ ಇರೋಕೆ ಸಾಧ್ಯನೇ ಇಲ್ಲ ಬಿಡಿ.

ಮರಣೋತ್ತರ ಪರೀಕ್ಷೆಯ ಬಳಿಕ ಆನೆ ಮರಿಯ ಸಾವಿಗೆ ನಿಖರವಾದ ಮಾಹಿತಿ ತಿಳಿದಿದ್ದು,ಬೋರ್​ವೆಲ್​ ಸಂಪರ್ಕ ಹೊಂದಿರುವ ವಿದ್ಯುತ್ ತಂತಿಯನ್ನು ಮುಟ್ಟಿದ್ದರಿಂದ ಮರಿ ಆನೆ ಸಾವಿಗೀಡಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಕುರ್ರಾ ಶ್ರೀನಿವಾಸ್ ಹೇಳಿದ್ದಾರೆ. ಏತನ್ಮಧ್ಯೆ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ತಾಯಿ ಆನೆಯ ಪಾಡು ನೋಡಿ ನೆಟ್ಟಿಗರು ಮನನೊಂದಿದ್ದಾರೆ. ಇನ್ನು ಕೆಲವರು ವಿದ್ಯುತ್ ಸಂಪರ್ಕ ತಂತಿ ಅಳವಡಿಸಿದ್ದಕ್ಕಾಗಿ ಅಧಿಕಾರಿಗಳ ವಿರುದ್ಧ ಕೋಪಗೊಂಡಿದ್ದಾರೆ.

Leave A Reply

Your email address will not be published.