ಸುಳ್ಯ :ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಭಕ್ತಿಗೀತೆ ಸಂಗೀತ ಸ್ಪರ್ಧಾ ಕಾರ್ಯಕ್ರಮ

ಸುಳ್ಯ : ಇಲ್ಲಿನ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಮಕ್ಕಳಿಗಾಗಿ ಭಕ್ತಿಗೀತೆ ಸಂಗೀತ ಸ್ಪರ್ಧೆಯು ಜರುಗಿತು .

ಕಾರ್ಯಕ್ರಮವನ್ನು ಸುಳ್ಯದ ತಹಸೀಲ್ದಾರ್ ರಾದ ಕು| ಅನಿತಾ ಲಕ್ಷ್ಮಿ ರವರು ಉದ್ಘಾಟಿಸಿದರು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರು ಮತ್ತು ಖ್ಯಾತ ಜ್ಯೋತಿಷಿಗಳಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು . ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಉಮಾದೇವಿ ರವರು ದಿವ್ಯ ಸಾನಿಧ್ಯ ವಹಿಸಿದ್ದರು . ಸುಳ್ಯದ ಸರ್ಕಲ್ ಇನ್ ಸ್ಪೆಕ್ಟರ್ ಶ್ರೀ ನವೀನ ಚಂದ್ರ ಜೋಗಿ ರವರು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಿದರು . ತಾಂತ್ರಿಕ ಕೃಷಿ ಅಧಿಕಾರಿಗಳಾದ ಶ್ರೀ ಮೋಹನ್ ನಂಗಾರು ರವರು ವೇದಿಕೆಯಲ್ಲಿದ್ದ ಗಣ್ಯರನ್ನು ಸನ್ಮಾನಿಸಿ ಶುಭ ಹಾರೈಸಿದರು . ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಹ ಸಂಚಾಲಕರಾದ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಮುಖ್ಯ ಅತಿಥಿಗಳಾಗಿದ್ದರು . ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಗಾಯಕ ಮತ್ತು ನಿರ್ದೇಶಕರಾದ ಪ್ರವೀಣ್ ಜಯ ವಿಟ್ಲ ಅವರಿಗೆ ಸಂಗೀತ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ದಿಯಾ ರಾವ್ ಮಂಗಳೂರು ಮತ್ತು ಅಸ್ಮಿತ್ ಎ ಜೆ ಮಂಗಳೂರು ಹಾಗೂ ಹರ್ಷಿತಾ ಕೆ ಎಸ್ ಸುಳ್ಯ ಅವರಿಗೆ ಬಹುಮಾನದ ಪ್ರಶಸ್ತಿ ಪತ್ರ ಮತ್ತು ಟ್ರೋಫಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸ್ಪರ್ಧೆಯಲ್ಲಿ ಪೂಜಾಶ್ರೀ ಬಳ್ಳಡ್ಕ , ಪಲ್ಲವಿ ಆಲೆಟ್ಟಿ , ವಿಶ್ವದೀಪ್ ಕುಂದಲ್ಪಾಡಿ , ರಿತಿಕಾ ರಮೇಶ್ ಪಿಲಿಕೋಡಿ , ಮೌಲ್ಯ ಮಜಿಕ್ಕೋಡಿ , ಆಶಾ ರಮೇಶ್ , ಯಜೀಶ್ ಕಡಂಬಾರ್ , ಬಬಿತಾ ಕಡಂಬಾರ್ , ಸ್ನಿಗ್ಧ ಎನ್ ಎಸ್ ಸುಳ್ಯ , ಗ್ರೀಷ್ಮಾ ಪೆರ್ಲಂಪಾಡಿ , ಅವನಿ ಎಮ್ ಎಸ್ ಸುಳ್ಯ , ಸನತ್ ಐವರ್ನಾಡು , ಇಶಾರ ಆಲೆಟ್ಟಿ , ಅಶ್ವಿಜ್ ಆತ್ರೇಯ ಸುಳ್ಯ , ತೇಜಸ್ ವಿಟ್ಲ ಮತ್ತು ಪೂರ್ಣಿಮಾ ಪೆರ್ಲಂಪಾಡಿ ಭಾಗವಹಿಸಿದ್ದರು .
ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು . ಹರಿಪ್ರಸಾದ್ ಪಿ ಸುಳ್ಯ ರವರು ಪ್ರಾರ್ಥನೆ ಹಾಡಿದರು.ಸುಮಂಗಲ ಲಕ್ಷ್ಮಣ ಕೋಳಿವಾಡ ವಂದಿಸಿದರು.

Leave A Reply

Your email address will not be published.