ತುಳುನಾಡ ಮಡಿಲಲ್ಲಿ ಮಿಂಚಲು ಸಿದ್ದರಾದ – ಶ್ರೀ ನಿಧಿ ಶೆಟ್ಟಿ
“ನಿಮ್ಮ ಜೀವನದಲ್ಲಿ ಏನಾದರೂ ಕಹಿ ಘಟನೆಗಳಾದರೆ, ಅದನ್ನು ಹೊರಹಾಕುವ ರೀತಿ ನಿಮ್ಮನ್ನು ಉನ್ನತ್ತ ಸ್ಥಾನಕ್ಕೆ ಕೊಂಡ್ಯೊಯುವಂತೆ ಇರಬೇಕೆಂದು. ಹೌದು , ಹುಟ್ಟಿನಿಂದ ಯಾವುದು ಸಿಗುತ್ತೋ, ಇಲ್ಲವೋ ಗೊತ್ತಿಲ್ಲ. ಸಾಯುವ ಮುನ್ನ ನಾನು ಜೀವಿಸುವುದು ಏತಕ್ಕೆ ಅನ್ನೋ ಸತ್ಯ ನಮಗೆ ಅರಿವಾಗಬೇಕು ಅಷ್ಟೇ.
ತುಳು ಭಾಷೆಯ ಪ್ರೇಮಿ,ಕಲಾರಂಗದ ಜ್ಯೋತಿ. ತುಳುನಾಡ ಗೋಪುರಕ್ಕೆ ಮಾತಿನ ನಿಧಿಯೆಂಬ ಕಲಶ. ಇವರು ಶ್ರೀ ನಿಧಿ ಶೆಟ್ಟಿ.
ಶೈಲಜಾ ಮತ್ತು ಶ್ರೀನಿವಾಸ್ ಶೆಟ್ಟಿ ದಂಪತಿಗಳ ಕುಟುಂಬಕ್ಕೆ ಬಾಗ್ಯಜ್ಯೋತಿಯಾಗಿ ಬೆಳೆದವರು ಶ್ರೀ ನಿಧಿ. ಪ್ರಾಥಮಿಕ ಶಿಕ್ಷಣವನ್ನು ಬಾಸೆಲ್ ಮಿಷನ್ ಮಂಗಳೂರಿನಲ್ಲಿ ಕಲಿತ ಇವರು,ಪ್ರೌಢ,ಪದವಿಪೂರ್ವ,ಪದವಿ ಶಿಕ್ಷಣವನ್ನು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಕಲಿತು,ಇದೀಗ ಪಿ ಜಿ ಡಿಪ್ಲೋಮಾ ಜರ್ನಲಿಸಂ ಇನ್ ಮಾಸ್ ಮೀಡಿಯಾ ಕಮ್ಯುನಿಕೇಶನ್ ಅನ್ ಅಭ್ಯಸಿಸುತ್ತಿದ್ದಾರೆ.
ತನ್ನೊಳಗಿನ ಕಲೆಯ ಪ್ರಸ್ತುತತೆಯನ್ನು ಜಗತ್ತಿನ ಎದುರು ಪ್ರಸ್ತುತಪಡಿಸುಲು ಬಾಲ್ಯದಿಂದಲೂ ಕಠಿಣ ಪರಿಶ್ರಮ ಪಟ್ಟ ದಿಟ್ಟ ಹೆಣ್ಣು. ತನ್ನ ಮಾತೃ ಭಾಷೆಯ ಬಗೆಗಿನ ಒಲವು ತನ್ನಿಂದ ಏನಾದರೂ ಸಾಧಿಸಬೇಕೆಂಬ ಛಲ ರಕ್ತಗತವಾಗಿ ಬಂದ ಗುಣ. ರಾಕೇಶ್ ರೈ ಅಡ್ಕ ಇವರ ಜೊತೆ ಯಕ್ಷಗಾನ ಕಲಿಯುತ್ತಾ ಕಲಾಭಿ (ರಿ) ತಂಡದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರ ಜೊತೆಗೆ ಸಂಗೀತ, ಚಿತ್ರಕಲೆ, ಹಿನ್ನಲೆಧ್ವನಿ, ಮಂಡಲ ಆಟ್ಸ್, ಕಥೆ, ಕವನ ರಚನೆಯ ನಿಸ್ಸೀಮ ಕಲಾವಿದೆ.
ಮಾತೃ ಹೃದಯದ ಮಮತೆಯ ಪಂಜರದೊಳಗೆ ,ಮಾತೆ ನಿನ್ನ ಕನಸ್ಸೇ ನನಗೆ ಪ್ರೇರಣೆ,,ನಿನಗಾಗೆ ದುಡಿಯುವೇ ಎಂದೆನ್ನುತ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ,ಕಾರ್ಯಕ್ರಮದ ಸಂಯೋಜಕಿಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. “ಲೇಖನಿ ಖಡ್ಗಕ್ಕಿಂತ ಹರಿತ” ಎಂಬ ಮಾತಿದೆ ತನ್ನ ಅನುಭವವನ್ನು ಸಂಪೂರ್ಣವಾಗಿ ಬರವಣಿಗೆಯ ಮೇಲೆ ದಾರೆ ಎರೆದು ಅಗೋಲಿ ಮಂಜಣ್ಣ,ಸತ್ಯದಪ್ಪೆ ಸಿರಿ,ನಾಗಸಿರಿ,ಮೈಮೆದಪ್ಪೆ ಮಂತ್ರದೇವತೆ,ತುಳುನಾಡ ವೈಭವದಂತಹ ಸಣ್ಣಪುಟ್ಟ ಕಥೆ ,ಕಥೆಗೆ ಸಂಭಾಷಣೆ ಬರೆದು ,ನಾಟಕ ತಂಡಗಳಿಗೆ ನೀಡುತ್ತಾ ,ನಾಟಕಗಳ ಪ್ರದರ್ಶನ ಮಾಡುತ್ತಿದ್ದಾರೆ. ಹಲವಾರು ಲೇಖನವನ್ನು ಬರೆಯುತ್ತಾ ಸಮಾಜದ ಸ್ವಾಸ್ಥ್ಯ, ಸಂಸ್ಕೃತಿಯ ಅಡಿಪಾಯವನ್ನು ಯುವ ಜನತೆಗೆ ತೋರಿಸಿಕೊಟ್ಟ ಕೀರ್ತಿ ನಿಧಿಯವರಿಗೆ ಸಲ್ಲುತ್ತೇ.
ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ಕಳೆಯುತ್ತಾ, ಹಾದಿ ತಪ್ಪುವ ಕೆಲವು ಯುವಜನತೆಯ ಮಧ್ಯೆ,ಸಮಾಜದ ಕಣ್ಮಣಿಯಾಗಿ, ಸಂಸ್ಕೃತಿಯ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ತನ್ನ ಅನುಭವದ ಬತ್ತಳಿಕೆಯಲ್ಲಿ ಬಂದಿಯಾಗಿಟ್ಟು, ಸಮಾಜಕ್ಕೆ ಉಣಬಡಿಸುತ್ತಾ ಬಂದಿರುವ ಇವರು. ಸಾಮಾಜಿಕ ಜಾಲತಾಣಗಳನ್ನು ಸಂದ್ಬಳಕೆ ಮಾಡುವತ್ತ ದೃಷ್ಠಿ ಹಾಯಿಸುತ್ತಿದ್ದಾರೆ.
ಮೊದಲೇ ಹೇಳಿದಂತೆ, ಕಷ್ಟ,ದುಃಖ,ಹತಾಶೆಗಳು ಮಾನವನಿಗೆ ಬಂದೇ ಬರುತ್ತೇ. ಜೀವನದ ಕಹಿ ಅನುಭವಗಳನ್ನು ಸಿಹಿಯಾಗಿ ಪರಿವರ್ತಿಸುವ ಜಾಣ್ಮೆ ಇರಬೇಕಷ್ಟೇ. ಶ್ರೀ ನಿಧಿಯವರು ತನ್ನ ಜೀವನದಲ್ಲಾದ ಕಹಿ ಅನುಭವಗಳಿಂದ ಒಬ್ಬಂಟಿಯಾಗಿ ನಡೆದು ನನ್ನ ಕನಸನ್ನು ಸಾಕಾರಗೊಳಿಸಬೇಕೆಂದು ಒಬ್ಬ ಅತ್ಯುತ್ತಮ ಕಲಾವಿದೆಯಾಗಿ ನಮ್ಮೆದುರಲ್ಲಿ ಇಂದು ನಿಂತಿದ್ದಾರೆ. ಇವರ ನಿರೂಪಣೆಯ ಕ್ಷೇತ್ರಕ್ಕೆ ಅಡಿಪಾಯ ,ಇವರ ಸ್ನೇಹಿತೆಯರು. ರಕ್ತಸಂಬಂಧಗಳನ್ನು ಮೀರಿದ ಬಂಧವು, ವ್ಯಕ್ತಿಯ ಜೀವನದಲ್ಲೇ ಬದಲಾವಣೆ ತರಲು ಸಾಧ್ಯ. ಸ್ನೇಹಿತೆಯರೇ ಇವರ ನಿರೂಪಣೆಗೆ ಬಲ. ಇದರ ಜೊತೆಗೆ ಶ್ರೀಮತಿ ಮಂಜುಳಾ ಶೆಟ್ಟಿ ,ಕವಿತಾ ಪಕ್ಕಳ ಇವರ ಸಾಧನೆಗೆ ಸ್ಪೂರ್ತಿಯ ಗುರುಗಳು. ಇವರ ಬರವಣಿಗೆಯ ಕ್ಷೇತ್ರಕ್ಕೆ ಕೆ.ಜೆ ಶೆಟ್ಟಿ ಕಡಂದಲೆಯವರ ಮಾತೇ ಸ್ಪೂರ್ತಿ ಎಂದು ಹೇಳುತ್ತಾರೆ ನಿಧಿ.
ಹಿಟ್ಟ ಹೆಜ್ಜೆ ಹಿಂದಿಡಬೇಡ,ಇಂದಿನ ಸೋಲು ಮುಂದಿನ ಗೆಲುವಿಗೆ ಯಶಸ್ಸಿನ ಮೆಟ್ಟಿಲಾಗಬಹುದು. ಕಷ್ಟ ಬರುವುದೂ ಸರ್ವೆ ಸಾಮಾನ್ಯ ಅದನ್ನು ಹಿಮ್ಮೆಟ್ಟಿಸು. ಗೆಲುವು ಖಂಡಿತ ದಕ್ಕಬಹುದು ಎಂದು ಹೇಳುತ್ತಾರೆ ನಿಧಿ.
ಮಾತೃಭಾಷೆಯ ಗಣಿಯೊಳಗೆ, ಸೋಲು ತುಂಬಿದ ಜೀವನದಲ್ಲಿ , ಕಷ್ಟ ಪಟ್ಟ ದಿನಗಳ ಎಣಿಕೆಯ ಆಗಸದಲ್ಲಿ ಚಂದಿರನಂತೆ ಗೆಲುವು ಕಂಡ ನಿಧಿಯೆಂಬ ಅಗಮ್ಯ ಚುಕ್ಕಿಯು, ಭುವಿಯೊಳಗನ ಮಾನವರ ಆಗರದೊಳಗೆ ಸೂರ್ಯನಂತೆ ಬೆಳಗಲಿ ಎಂಬುದೇ ನನ್ನ ಆಶಯ.
ಬರಹ : ನೀತು ಬೆದ್ರ