ಸುರತ್ಕಲ್ ಬೀಚ್ ನಲ್ಲಿ ಅನ್ಯ ಕೋಮಿನ ಯುವಕರ ಜೊತೆಗೆ ಕಾರಿನಲ್ಲಿ ಪತ್ತೆಯಾದ ಹಿಂದೂ ಯುವತಿ!! ಭಜರಂಗದಳ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

Share the Article

ಮಂಗಳೂರು:ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೋರ್ವಳು ಕಾರಿನಲ್ಲಿ ಕುಳಿತು ಮೋಜು ಮಸ್ತಿಯಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಿದ ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ಜೋಡಿಗಳನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ:ಇಂದು ಸಂಜೆ ವೇಳೆಗೆ ಇಬ್ಬರು ಅನ್ಯಕೋಮಿನ ಯುವಕರ ಜೊತೆಗೆ ಕಾರಿನಲ್ಲಿ ಸುರತ್ಕಲ್ ಬೀಚಿಗೆ ಯುವತಿಯೊಬ್ಬಳು ಬಂದಿದ್ದು,ವಿಷಯ ತಿಳಿದ ಕೂಡಲೇ ಭಜರಂಗದಳದ ಕಾರ್ಯಕರ್ತರು ಜೋಡಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಯುವಕನನ್ನು ಕುದ್ರೋಳಿ ನಿವಾಸಿ ಮೆಹಬೂಬ್ ಎಂದು ಗುರುತಿಸಲಾಗಿದ್ದು, ಜೋಡಿಯ ಜೊತೆಗಿದ್ದ ಇನ್ನೊರ್ವ ಯುವಕ ಇವರಿಗೆ ರಕ್ಷಣೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಯುವತಿಯು ಮೂಲತಃ ಹುಬ್ಬಳ್ಳಿ ಮೂಲದವಳಾಗಿದ್ದು,ಕಾಲೇಜು ವಿದ್ಯಾರ್ಥಿನಿಯಾಗಿ ನಗರದ ಪಿಜಿ ಯೊಂದರಲ್ಲಿ ವಾಸ್ತವ್ಯ ಹೂಡಿದ್ದಳು ಎಂದು ತಿಳಿದುಬಂದಿದೆ. ಸದ್ಯ ಜೋಡಿಯು ಸುರತ್ಕಲ್ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply