ಏನೇ ನೋವಿರಲಿ ಈ ವೈದ್ಯನ ಚಿಕಿತ್ಸೆ ಬೆಂಕಿಯಿಂದಲೇ !!? | ಏನೀ ಚಿಕಿತ್ಸೆ?? ಬೆಂಕಿಯನ್ನು ಬಳಸಿಕೊಂಡು ಹೇಗೆ ಚಿಕಿತ್ಸೆ ನೀಡುವುದು? ಎಂಬುದನ್ನು ನೀವೇ ತಿಳಿದುಕೊಳ್ಳಿ
ಇಂದು ಯಾರೇ ಅನಾರೋಗ್ಯದಿಂದ ಕೂಡಿದರು ಅದಕ್ಕೆ ತಕ್ಕಂತೆ ಮೆಡಿಸಿನ್ ಗಳಿವೆ. ಹಿಂದಿನ ಕಾಲದಲ್ಲಿ ಹಳ್ಳಿ ಮದ್ದುಗಳ ಮೇಲೆ ಅವಲಂಬಿಸಿ, ಅದರಿಂದ ಗುಣ ಮುಖರಾಗುತಿದ್ದರು. ಆದರೆ ಈಗ ಇಂಗ್ಲಿಷ್ ಮಾತ್ರೆಗಳ ಮೇಲೆಯೇ ಹೆಚ್ಚಿನ ನಂಬಿಕೆ ಇಟ್ಟುಕೊಂಡು ಚಿಕಿತ್ಸೆಗೆಂದು ದವಾಖಾನೆ ಸೇರುತ್ತಾರೆ.
ಹಳ್ಳಿ ಮದ್ದುಗಳಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಆಯುರ್ವೇದ, ಹೋಮಿಯೋಪತಿ, ಅಲೋಪತಿ, ವ್ಯಾಯಾವ, ಯೋಗ ಹೀಗೆ ಹಲವು ರೀತಿಯ ಚಿಕಿತ್ಸೆಗಳ ಮೂಲಕ ರೋಗಗಳನ್ನು ನಿವಾರಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯನ ಚಿಕಿತ್ಸೆ ಕೇಳಲು ವಿಚಿತ್ರವಾಗಿದೆ. ಆದರೆ ಈತನ ಬಳಿ ಅದೆಷ್ಟೋ ಮಂದಿ ಚಿಕಿತ್ಸೆಗಾಗಿ ಸಾಲು-ಸಾಲು ಜನ ಬರುತ್ತಾರಂತೆ. ಅಷ್ಟಕ್ಕೂ ಈ ವೈದ್ಯರ ಚಿಕಿತ್ಸೆ ಯಾವ ರೀತಿಯದ್ದೆಂದು ಮುಂದೆ ನೋಡಿ.
ಹೌದು. ಈ ವೈದ್ಯರದು ಫೈರ್ ಟ್ರೀಟ್ಮೆಂಟ್.ರೋಗಿಗಳಿಗೆ ಎಲ್ಲಿ ನೋವಾಗಿದೆಯೋ ಅಲ್ಲಿಯೇ ಬೆಂಕಿ ಕೆಂಡ ಹಚ್ಚಿ ನೋವನ್ನು ಶಮನಗೊಳಿಸುತ್ತಾನೆ.ಕೇಳಲು ಭಯಂಕರವಾದರೂ ಚಿಕಿತ್ಸೆಯಿಂದ ಮಾತ್ರ ಗುಣಮುಖರಾಗುತ್ತಾರಂತೆ.ಈ ಚಿಕಿತ್ಸೆಯ ಹೆಸರು ‘ಫೈರ್ ಥೆರಫಿ’ ಈ ಚಿಕಿತ್ಸೆಯನ್ನು ಝಾಂಗ್ ಫೆಂಗಾವೋ ಎಂಬುವವರು ನೀಡುತ್ತಾರೆ.ಈ ಚಿಕಿತ್ಸೆ ಮಾನವ ಇತಿಹಾಸದ 4ನೇ ಕ್ರಾಂತಿ ಎಂದು ಹೇಳುತ್ತಾರೆ. ಈ ಚಿಕಿತ್ಸೆಯಿಂದ ವಾಸಿಯಾಗದೇ ಇರುವಂತ ಅನೇಕ ಗಂಭೀರ ಖಾಯಿಲೆಗಳು ಗುಣವಾಗುತ್ತದೆಯಂತೆ. ಅಷ್ಟೇ ಅಲ್ಲದೆ ಇದರಿಂದ ಅಜೀರ್ಣ, ಡಿಪ್ರೆಶನ್, ಒತ್ತಡ, ಬಂಜೆತನ, ಕ್ಯಾನ್ಸರ್ ಗಳು ಕೂಡ ಕಡಿಮೆಯಾಗುತ್ತವೆಯಂತೆ, ಈ ಥೆರಪಿ ಪ್ರಾಚೀನ ಚೀನಾದ ನಂಬಿಕೆಗಳ ಆಧಾರವಾಗಿದೆ.
ಫೈರ್ ಥೆರಪಿಯಲ್ಲಿ ಮೊದಲು ರೋಗಿಯ ಹೊಟ್ಟೆಗೆ ಗಿಡಮೂಲಿಕೆಗಳ ಲೇಹ್ಯವನ್ನು ಹಚ್ಚಿ,ನಂತರ ಹೊಟ್ಟೆಯನ್ನು ಒಂದು ಟವೆಲ್ ನಿಂದ ಮುಚ್ಚಲಾಗುತ್ತದೆ. ಬಳಿಕ ಟವೆಲ್ ಮೇಲೆ ನೀರನ್ನು ಚಿಮುಕಿಸಿ, ರೋಗಿಯ ಹೊಟ್ಟೆಯ ಮೇಲೆ ಬೆಂಕಿಯನ್ನು ಹಚ್ಚಲಾಗುತ್ತದೆ.
ಚೀನಾದಲ್ಲಿ ಈ ಬೆಂಕಿ ಚಿಕಿತ್ಸೆ ಎಷ್ಟೇ ಪ್ರಸಿದ್ಧಿಯಾದರೂ ಇದರ ಬಗ್ಗೆ ಅನೇಕ ಸವಾಲುಗಳು ಕೂಡ ಎದುರಾಗಿವೆ. ಈ ಥೆರಫಿಯನ್ನು ಯಾರು ಮಾಡುತ್ತಾರೋ ಅವರ ಬಳಿ ಯಾವುದೇ ಸರ್ಟಿಫಿಕೇಟ್ ಇರುವುದಿಲ್ಲ. ಯಾವ ನಕಲಿ ವೈದ್ಯ ಬೇಕಾದರೂ ಈ ಚಿಕಿತ್ಸೆಯನ್ನು ಕೊಡಬಹುದು. ಇದರಿಂದ ಅನೇಕ ರೋಗಿಗಳು ಗಾಯಗೊಂಡಿದ್ದು ಅಲ್ಲದೆ,ಅನೇಕ ರೋಗಿಗಳ ಶರೀರ ಸುಟ್ಟು ಹೋಗಿದೆ.ಇದರ ಕುರಿತು ಮಾತನಾಡುವ ಝಾಂಗ್ ಫೆಂಗಾವೋ ಅವರು, ಸರಿಯಾಗಿ ತಿಳಿದುಕೊಳ್ಳದೇ ಈ ಚಿಕಿತ್ಸೆಯನ್ನು ಮಾಡುವುದರಿಂದ ಅಂತಹ ಅವಘಡಗಳು ಸಂಭವಿಸುತ್ತವೆ. ನಾನು ಈ ಥೆರಫಿಯನ್ನು ನೂರಾರು ಜನರಿಗೆ ಹೇಳಿಕೊಟ್ಟಿದ್ದೇನೆ. ಸಾವಿರಾರು ಜನರಿಗೆ ಇದರ ಮೂಲಕವೇ ಚಿಕಿತ್ಸೆ ನೀಡಿದ್ದೇನೆ. ಎಲ್ಲರೂ ಗುಣಮುಖರಾಗಿದ್ದಾರೆ ಎನ್ನುತ್ತಾರೆ ಇವರು.