ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳನಿಂದ ಮೊದಲು ದೇವರ ಪಾದಕ್ಕೆ ನಮಸ್ಕಾರ !! | ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಖತ್ ವೈರಲ್

Share the Article

ಕಳ್ಳರು ಎಲ್ಲಿ ನಮಗೆ ಕದಿಯಲು ಅವಕಾಶ ಸಿಗುತ್ತದೆ ಎಂದು ಕಾದು ಕುಳಿತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ದೇವರ ಹುಂಡಿಗೆ ಕನ್ನ ಹಾಕಲು ಹೋಗುವ ಮೊದಲು ದೇವರ ಪಾದಕ್ಕೆ ನಮಸ್ಕರಿಸಿದ ವಿಲಕ್ಷಣ ಘಟನೆಯೊಂದು ಮಹಾರಾಷ್ಟ್ರದ ಥಾಣೆ ನಗರದ ದೇವಸ್ಥಾನದಲ್ಲಿ ನಡೆದಿದೆ.

ಮಹಾರಾಷ್ಟ್ರದ ಥಾಣೆ ನಗರದ ಖೋಪಾಟ್ ಪ್ರದೇಶದ ಹನುಮಂತ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೊಬ್ಬ ಹುಂಡಿಯನ್ನು ಕದಿಯಲು ಬಂದಿದ್ದಾನೆ. ಆದರೆ ಇಲ್ಲಿರುವ ವಿಶೇಷವೆಂದರೆ ಆತ ಹಣ ಕದಿಯುವ ಮುನ್ನ ಹನುಮಾನ್ ದೇವರ ಕಾಲಿಗೆ ಬಿದ್ದು, ಪ್ರಾರ್ಥನೆ ಮಾಡಿದ್ದಾನೆ. ನಂತರ ವಿಗ್ರಹದ ಮುಂದೆ ಇದ್ದ ಹುಂಡಿಯನ್ನು ಕದ್ದು ಪರಾರಿಯಾಗಿದ್ದಾನೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ದೇವಸ್ಥಾನಕ್ಕೆ ಬೆಳಗ್ಗೆ ಬಂದು ನೋಡಿದ ನಂತರ ಕಳ್ಳತನವಾಗಿರುವುದು ತಿಳಿದುಬಂದಿದೆ. ನಂತರ ಪೊಲೀಸರಿಗೆ ಈ ಮಾಹಿತಿ ತಿಳಿಸಿದ್ದು, ಅವರು ಸಿಸಿಟಿವಿಯನ್ನು ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ನೌಪದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತ ಕದ್ದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Leave A Reply