ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಉಚಿತ ಕಂಪ್ಯೂಟರ್ ತರಗತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪ್ರಾರಂಭ
ಪುತ್ತೂರು : ಬ್ಯಾಂಕಿಂಗ್, ಪೊಲೀಸ್ ನೇಮಕಾತಿಯಿಂದ ಹಿಡಿದು ಅತ್ಯುನ್ನತ ಐಎಎಸ್ (ಭಾರತೀಯ ನಾಗರಿಕ ಸೇವೆಗಳು) ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪುತ್ತೂರಿನ ಏಕೈಕ ತರಬೇತಿ ಅಕಾಡೆಮಿಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಬ್ಯಾಂಕಿಂಗ್ ( ರಾಷ್ಟ್ರೀಕೃತ / ಗ್ರಾಮೀಣ ಬ್ಯಾಂಕ್, ಕೆ.ಯಂ.ಎಫ್ ಸೇರಿದಂತೆ ಎಲ್ಲಾ ಸಹಕಾರಿ ಸಂಘಗಳು, ಕ್ಯಾಂಪ್ಕೋ ನೇಮಕಾತಿ ಪರೀಕ್ಷೆ) , ಸ್ಟಾಫ್ ಸೆಲೆಕ್ಷನ್ ಕಮಿಷನ್ (ಸಿಬ್ಬಂದಿ ಆಯ್ಕೆ ಆಯೋಗ), ಪೊಲೀಸ್ ಸಬ್ ಇನ್ಸ್ ಪೆಕ್ಟರ್ / ಕಾನ್ಸ್ಟೇಬಲ್) , ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಕಾರ್ಯದರ್ಶಿ (ಗ್ರೇಡ್-1 & ಗ್ರೇಡ್-2) ನೇಮಕಾತಿಗಳಿಗೆ ಸಂಬಂಧಿಸಿದ ಪರೀಕ್ಷೆಗಳ ತರಬೇತಿಯು ಪ್ರಾರಂಭಗೊಂಡಿದ್ದು, ಸದ್ಯ ಓದು ಮುಗಿಸಿರುವ / ಸದ್ಯ ಓದುತ್ತಿರುವ / ಉದ್ಯೋಗದಲ್ಲಿರುವವರು ಈ ತರಬೇತಿಯನ್ನು ಪಡೆದುಕೊಳ್ಳಬಹುದು.
ಈ ತರಬೇತಿಯನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಕಂಪ್ಯೂಟರ್ ತರಬೇತಿಯನ್ನು ಉಚಿತವಾಗಿ ವಿದ್ಯಾಮಾತಾ ಅಕಾಡೆಮಿಯ ಮಾತೃಸಂಸ್ಥೆಯಾದ ‘ವಿದ್ಯಾಮಾತಾ ಫೌಂಡೇಶನ್ ‘ನ ಸಹಯೋಗದಲ್ಲಿ ನೀಡಲಾಗುವುದು. *ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶಾತಿಯಲ್ಲಿ ಗ್ರಾಮೀಣ / ಕನ್ನಡ ಮಾಧ್ಯಮ / ಬಿಪಿಎಲ್ / ಅಂತ್ಯೋದಯ ಕಾರ್ಡುದಾರರಿಗೆ ಕೇವಲ ತರಬೇತುದಾರರ ಗೌರವಧನವನ್ನಷ್ಟೇ ವಿಧಿಸಲಾಗುವುದು. ಆಫ್ಲೈನ್ ತರಗತಿಗಳು ವಾರದ 4 ದಿನ (ಬೆ.9 ರಿಂದ 3 ರ ವರೆಗೆ) ಹಾಗೂ ಆನ್ಲೈನ್ ತರಗತಿಗಳು (ರಾತ್ರಿ 7 ರಿಂದ 9 ರ ವರೆಗೆ) ಲಭ್ಯವಿರುತ್ತದೆ. ವಾರಾಂತ್ಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಪರೀಕ್ಷೆಗಳು, ಉಚಿತ ಕಾರ್ಯಾಗಾರಗಳು, ದಿನನಿತ್ಯದ ಖಾಸಗಿ / ಸರಕಾರಿ ಉದ್ಯೋಗಗಳ ಮಾಹಿತಿಗಳು ಮತ್ತು ದಿನನಿತ್ಯದ ಪ್ರಚಲಿತ ವಿದ್ಯಮಾನಗಳ PDF ಗಳನ್ನು ಉಚಿತವಾಗಿ ನೀಡಲಾಗುವುದು. ಪ್ರವೇಶಾತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಎಲ್ಲಾ ನೇಮಕಾತಿಯ ಅರ್ಜಿಗಳನ್ನು ಉಚಿತವಾಗಿ ಹಾಕಿಕೊಡಲಾಗುತ್ತದೆ ಮತ್ತು ಪರೀಕ್ಷೆಯ ಪ್ರವೇಶ ಪತ್ರ (ಹಾಲ್ ಟಿಕೆಟ್) ವರೆಗಿನ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗುತ್ತದೆ.