ಪೇಜಾವರ ಶ್ರೀ ಕುರಿತು
ಹಂಸಲೇಖ ವಿವಾದಾತ್ಮಕ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ | ‘ಮುಸ್ಲಿಂ ಸ್ನೇಹಿತರನ್ನು ಮನೆಗೆ ಕರೆಸಿ ಹಂದಿ ಮಾಂಸ ಮಾಡಿ ಬಡಿಸಿ ನೋಡೋಣ’ ಎಂದು ತಾಕೀತು

ಮೈಸೂರು: ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ಹಂಸಲೇಖ ವಿವಾದಾತ್ಮವಾಗಿ ಮಾತನಾಡಿರುವುದರ ಬಗ್ಗೆ ಎಲ್ಲರಿಂದಲೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದ್ದು, ಪೇಜಾವರ ಶ್ರೀಗಳು ಮಾಂಸ ತಿನ್ನುತ್ತಿದ್ದರ ಎಂಬ ಹಂಸಲೇಖರ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಹಂಸಲೇಖ ವಿರುದ್ಧ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಯಿಸಿದ್ದಾರೆ.

 

‘ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖರವರು ಪರಿಜ್ಞಾನದಿಂದ ಮಾತನಾಡಬೇಕಿತ್ತು. ಜನಾಭಿಪ್ರಾಯದ ವಿರುದ್ಧ ಮಾತನಾಡಿ ನಂತರ ಕ್ಷಮೆಯಾಚಿಸುವ ಚಾಳಿ ಹೆಚ್ಚಾಗಿದೆ,” ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಮೈಸೂರಿನಲ್ಲಿ ಹೇಳಿದ್ದಾರೆ.ಪೇಜಾವರ ಶ್ರೀಗಳು ಕೇವಲ ಒಂದು ಜಾತಿಯ ಸಂತರು‌ ಅಲ್ಲ. ಅವರು ರಾಮ ಜನ್ಮಭೂಮಿಯ ಉಳಿವಿಗಾಗಿ ಹೋರಾಟ ಮಾಡಿದವರು. ದಲಿತ ಕೇರಿಗಳಿಗೆ ತೆರಳಿ ಒಗ್ಗಟ್ಟಿನ ಮನೋಭಾವದಲ್ಲಿ ಸಂಘಟನೆ ಮಾಡುತ್ತಿದ್ದವರು,” ಎಂದರು.

ಬಾಯಿ ತಪ್ಪಿ ಇಂತಹ ಮಾತುಗಳು ಬರಲು ಸಾಧ್ಯವಿಲ್ಲ. ಇದು ಉದ್ದೇಶ ಪೂರ್ವಕವಾಗಿ ಪ್ರಚಾರದ ದೃಷ್ಟಿಯಿಂದ ಹಂಸಲೇಖ ಈ ರೀತಿ ಮಾತಾಡಿದ್ದಾರೆ ಎಂದು ಸಂಸದ ರೊಚ್ಚಿಗೆದ್ದಿದ್ದಾರೆ.ಪೇಜಾವರ ಶ್ರೀಗಳು ಬೇರೆ ರೀತಿಯ ಜಾತಿ ಸ್ವಾಮೀಜಿ ರೀತಿ ಅಲ್ಲ. ಕರ್ಮಠ ವ್ಯವಸ್ಥೆಯನ್ನು ಮೀರಿ ಸಮಾನತೆ ಸಾರಿದವರು ಪೇಜಾವರ ಶ್ರೀಗಳು. ಸಾಧು-ಸಂತರ ಆಹಾರ ಪದ್ಧತಿ ಸಸ್ಯಾಹಾರ. ಮನಸ್ಸಿನ ತಾರತಮ್ಯ ತೆಗೆದು ಹಾಕಲು ಶ್ರೀಗಳು ಹೋಗಿದ್ದರೆ ಹೊರತು ಆಹಾರ ಪದ್ಧತಿಯ ಸಮಾನತೆಗೆ ಅಲ್ಲ.

ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರನ್ನು ಕರೆಯಿರಿ. ಅವರಿಗೆ ಹಂದಿ ಮಾಂಸದ ಊಟ ಹಾಕಿ. ಅವರು ತಿನ್ನುತ್ತಾರಾ ನೋಡಿ? ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷೇಧ. ಅದಕ್ಕೆ ಅವರು ತಿನ್ನುವುದಿಲ್ಲ. ಆಗ ಅದನ್ನು ತಪ್ಪು ಎನ್ನುತ್ತೀರಾ? ಪ್ರಗತಿಪರ ಎನ್ನಿಸಿಕೊಳ್ಳುವ ಗೀಳಿಗೆ ಬಿದ್ದು, ಪ್ರಚಾರಕ್ಕಾಗಿ ಹೀಗೆ ಮಾತಾಡುತ್ತಿದ್ದಾರೆ,” ಎಂದು ಆರೋಪಿಸಿದರು.

Leave A Reply

Your email address will not be published.