ಫೇಸ್ಬುಕ್ ಬಳಕೆ ಕಡಿಮೆ ಮಾಡಲು ಈತ ಮಾಡಿದ ಮಾಸ್ಟರ್ ಪ್ಲಾನ್ ನೋಡಿ ಫಿದಾ ಆದ ನೆಟ್ಟಿಗರು!! |ಅಷ್ಟಕ್ಕೂ ಈತನ ಪ್ಲಾನ್ ನೋಡಿ ನೀವೇ ನಿರ್ಧರಿಸಿ ಹೀಗೂ ಆಲೋಚನೆ ಮಾಡುವ ಜನರು ಇರುತ್ತಾರಾ ಎಂದು?!!!
ಇಂದಿನ ಜಗತ್ತು ಎಷ್ಟು ಮುಂದುವರಿದಿದೆಯೋ ಅಷ್ಟೇ ಜನರು ಕೂಡ ಬದಲಾಗಿದ್ದಾರೆ. ತಂತ್ರಜ್ಞಾನಗಳ ಹಾವಳಿ ಅಧಿಕವಾದ್ದರಿಂದ ಅದರ ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ.ಇವಾಗ ಅಂತೂ ಯಾರೊಬ್ಬರೂ ಕೂಡ ಫೇಸ್ಬುಕ್, ಇನ್ಸ್ಟಾಗ್ರಾಮ್ ಉಪಯೋಗಿಸದೆ ಇರುವುದೇ ಇಲ್ಲ.
ಹೌದು. ಇಂದು ನಾವೆಲ್ಲ ಈ ಸಾಮಾಜಿಕ ಮಾಧ್ಯಮಕ್ಕೆ ಎಷ್ಟು ಅಡಿಕ್ಟ್ ಆಗಿದ್ದೇವೆ ಎಂದರೆ ಒಂದು ಹೊತ್ತು ಮೊಬೈಲ್ ಇಲ್ಲದೆ ಕೂರಲು ಆಗದ ಪರಿಸ್ಥಿತಿಗೆ ಬಂದಿಳಿದಿದ್ದೇವೆ. ಮುಂಜಾನೆ ಏಳುವಲ್ಲಿಂದ ಹಿಡಿದು ಮುಸ್ಸಂಜೆ ವೇಳೆ ಕಳೆದು ನಡು ರಾತ್ರಿವರೆಗೂ ಪಕ್ಕದಲ್ಲೇ ಹಿಡಿದು ಕೊಂಡಿರುತ್ತೇವೆ.ಇನ್ಸ್ಟಾಗ್ರಾಮ್, ಫೇಸ್ಬುಕ್ ನೋಡುತಿದ್ದರೆ ಅಂತೂ ಸಮಯ ಕಳೆದು ಹೋಗುವ ಅರಿವೇ ಇರುವುದಿಲ್ಲ.ಅದೆಷ್ಟೋ ಬಾರಿ ಇದರಿಂದ ದೂರ ಇದ್ದು ಬಿಡೋಣವೆಂದು ಪ್ರಯತ್ನಿಸಿದರು ಮತ್ತದೇ ಗುಂಗು. ಇದೇ ರೀತಿ ಒಬ್ಬ ವ್ಯಕ್ತಿ ಫೇಸ್ಬುಕ್ ನಿಂದ ದೂರ ಇರಲು ಅದೆಷ್ಟು ವ್ಯಥೆ ಪಟ್ಟರೂ ತನ್ನಿಂದಾಗದ ಕಾರಣ, ಆತ ಫೇಸ್ಬುಕ್ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಕಪಾಳಮೋಕ್ಷ ಮಾಡಲು ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡ.
ಅಷ್ಟಕ್ಕೂ ಈತನ ಈ ಹೊಸ ಪ್ರಯೋಗವು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.ಈ ಉದ್ಯಮಿ ತಾನು ಫೇಸ್ಬುಕ್ ಬಳಕೆಗೆ ಉಪಯೋಗಿಸುವ ಸಮಯದಲ್ಲಿ ಕೆಲಸದಲ್ಲಿ ಆಸಕ್ತಿ ಬರುವಂತೆ ಮಾಡಿಕೊಳ್ಳಲು ಮತ್ತು ಸಮಯವನ್ನು ವ್ಯರ್ಥ ಮಾಡದೇ ತನ್ನ ಉದ್ಯಮದಲ್ಲಿ ಹೆಚ್ಚಿನ ಗಳಿಕೆ ಸಾಧಿಸಲು ವೇರೆಬಲ್ ಡಿವೈಸಸ್ ಬ್ರಾಂಡ್ ಪಾವ್ಲೋಕ್ ಸಂಸ್ಥಾಪಕ ಮನೀಶ್ ಸೇಥಿ ಅವರು ಹೊಸ ಪ್ರಯೋಗವನ್ನು ಪ್ರಾರಂಭಿಸಿದರು. ಅವರು ಫೇಸ್ಬುಕ್ ಬಳಸಿದಾಗಲೆಲ್ಲಾ ಕಪಾಳ ಮೋಕ್ಷ ಮಾಡಲು ಓರ್ವ ಮಹಿಳೆಯನ್ನು ಕೆಲಸಕ್ಕಾಗಿ ನೇಮಿಸಿಕೊಂಡರು.ಈ ಹೊಸ ಪ್ರಯೋಗದ ಮೂಲಕ ಯಶಸ್ವಿಯಾದ ಕಥೆ ಮತ್ತೆ ಇಂಟರ್ನೆಟ್ನಲ್ಲಿ ಫುಲ್ ವೈರಲ್ ಆಗಿದೆ.
ಸೇಥಿ ಅವರು ಅಮೆರಿಕಾದ ಜಾಹಿರಾತುಗಳ ವೆಬ್ಸೈಟ್ ಕ್ರೇಗ್ಲಿಸ್ಟ್ ಮೂಲಕ ಮಹಿಳೆಯನ್ನು ನೇಮಿಸಿಕೊಂಡರು. ಕೆಫೆಯಲ್ಲಿ ಅಥವಾ ಮನೆಯಲ್ಲಿ ಅವರ ಪಕ್ಕದಲ್ಲಿ ಕುಳಿತು ಯಾವಾಗಲೂ ಕೆಲಸದಲ್ಲಿ ಎಚ್ಚರದಿಂದಿರಲು ನೋಡಿಕೊಳ್ಳಲು ಅವರು ಗಂಟೆಗೆ 8 ಡಾಲರ್ ನೀಡುತ್ತಿದ್ದರು. ನಾನು ಸಮಯವನ್ನು ವ್ಯರ್ಥ ಮಾಡುತ್ತಿರುವಾಗ ನೀವು ನನ್ನ ಮೇಲೆ ಕೂಗಾಡಬೇಕು ಅಥವಾ ಅಗತ್ಯವಿದ್ದಲ್ಲಿ ನನಗೆ ಕಪಾಳಮೋಕ್ಷ ಮಾಡಿ ಎಂದು ಅವರು 2012ರಲ್ಲಿ ಜಾಹಿರಾತಿನಲ್ಲಿ ಬರೆದಿದ್ದರು.
‘ಹೆಚ್ಚಿನ ದಿನಗಳಲ್ಲಿ ನನ್ನ ಸರಾಸರಿ ಉತ್ಪಾದಕತೆ ಸುಮಾರು ಶೇ. 35 ರಿಂದ 45 ರಷ್ಟಿತ್ತು. ಕಾರಾ ಎಂಬ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡ ಬಳಿಕ ನನ್ನ ಕೆಲಸದಲ್ಲಿ ಉತ್ಪಾದನೆ ಶೇ 98ಕ್ಕೆ ಏರಿಕೆಯಾಗಿದೆ’ ಎಂದು ಅವರು ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ಸೇಥಿ ಅವರ ಹೊಸ ಪ್ರಯೋಗವು 2012ರಲ್ಲಿ ವ್ಯಾಪಕವಾಗಿ ಹರಡಿತ್ತು.ಇದೀಗ ಒಂಭತ್ತು ವರ್ಷಗಳ ಬಳಿಕ ಎಲೋನ್ ಮಸ್ಕ್ ಅವರು ಕಳುಹಿಸಿದ ಎಮೋಜಿಯಿಂದ ಪುನಃ ಇಂಟರ್ನೆಟ್ನಲ್ಲಿ ಸುದ್ದಿಯಲ್ಲಿದೆ.ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಈ ಹೊಸ ಪ್ರಯೋಗದ ಕುರಿತಾದ ಟ್ವೀಟ್ಗೆ ಎರಡು ಬೆಂಕಿಯ ಎಮೋಜಿ ಕಳುಹಿಸುವ ಮೂಲಕ ಸರಳವಾಗಿ ಪ್ರತಿಕ್ರಿಯಿಸಿದರು. ಹೀಗಾಗಿ ಈ ಪ್ರಯೋಗವು ಅವರ ಹಿಂಬಾಲಕರಿಗೆ ಕುತೂಹಲವನ್ನು ಕೆರಳಿಸಿತು.ನಾನು ಈ ಚಿತ್ರದಲ್ಲಿರುವ ವ್ಯಕ್ತಿ. ಎಲೋನ್ ಮಸ್ಕ್ ಅವರು ನನ್ನ ಟ್ವೀಟ್ಗೆ ಎಮೋಜಿಗಳನ್ನು ಕಳುಹಿಸಿದ್ದಾರೆ ಎಂದು ಸೇಥಿ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪ್ರಯೋಗದ ಆಧಾರದ ಮೇಲೆ ಅವರು ವೇರೆಬಲ್ ಡಿವೈಸಸ್ ಕಂಪನಿಯನ್ನು ಸ್ಥಾಪಿಸಿದರು. ಎಲೋನ್ ಅವರು ಎಮೋಜಿಗಳನ್ನು ಕಳುಹಿಸಿದ ಬಳಿಕ ಸೇಥಿ ಅವರು ಇಂದು ನನ್ನ ದಿನವಲ್ಲವೇ? ಎಂದು ಉತ್ತರಿಸಿದ್ದಾರೆ. ಇತರ ಸಾಮಾಜಿಕ ಬಳಕೆದಾರರೂ ಸಹ ಕಪಾಳಮೋಕ್ಷದ ಪ್ರಯೋಗದ ಬಗ್ಗೆ ಕಾಮೆಂಟ್ ಮಾಡಿದ ಕೂಡಲೇ ಈ ಹೊಸ ಪ್ರಯೋಗ ಮತ್ತೆ ಇಂಟರ್ನೆಟ್ನಲ್ಲಿ ಸುದ್ದಿಯಲ್ಲಿದೆ.