ನ.16 : ಡಾ| ಎಂ.ಎನ್.ರಾಜೇಂದ್ರ ಕುಮಾರ್‌ ಅವರ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ | ನ.22 ನಾಮಪತ್ರ ಸಲ್ಲಿಕೆ

ಮಂಗಳೂರು : ದಕ್ಷಿಣ ಕನ್ನಡ ವಿಧಾನ ಪರಿಷತ್ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಸಂಘದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ಅವರ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ ನ. 16ರಂದು ಬೆಳಗ್ಗೆ 11 ಗಂಟೆಗೆ ನಗರದ ಓಶಿಯನ್ ಪರ್ಲ್ ಮುಂಭಾಗದ ಇನ್ ಲ್ಯಾಂಡ್ ಓರ್ನೆಟ್ ಸಮುಚ್ಚಯದಲ್ಲಿ ನಡೆಯಲಿದೆ.

 

ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ-ಸಹಕಾರ ಕ್ಷೇತ್ರದ ಗಣ್ಯರು ಭಾಗವಹಿಸುವರು. ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಕ್ಷೇತ್ರಗಳ ಮುಖ್ಯಸ್ಥರನ್ನೊಳಗೊಂಡ 17 ಸಮಿತಿ ಗಳನ್ನು ರಚಿಸಲಾಗಿದ್ದು ಉದ್ಘಾಟನೆ ಬಳಿಕ ಈ ಸಮಿತಿಗಳ ಸಮಾಲೋಚನೆ ಸಭೆ ನಡೆಯಲಿದೆ.

ನ. 22ರಂದು ನಾಮಪತ್ರ ಸಲ್ಲಿಕೆ: ಡಾ| ರಾಜೇಂದ್ರ ಕುಮಾರ್‌ ಅವರು ನ. 22ರಂದು ಪ್ರಚಾರ ಕಚೇರಿಯಿಂದ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಅಭಿಮಾನಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

Leave A Reply

Your email address will not be published.