ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಚಾಲನೆಯಲ್ಲಿರುವಾಗಲೇ ಹಳಿಯ ಮೇಲೆ ಉರುಳಿ ಬಿದ್ದ ಬಂಡೆಗಳು|ಅದೃಷ್ಟವಶಾತ್ ಪ್ರಯಾಣಿಕರು ಪಾರು
ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ರೈಲು ಚಾಲನೆಯಲ್ಲಿರುವಾಗಲೇ ಹಳಿಯ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಐದು ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ.
ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲು ತೊಪ್ಪೂರು-ಶಿವಡಿ ಬಳಿ ಸಂಚರಿಸುವಾಗ,ಬೆಂಗಳೂರು ವಿಭಾಗದ ಟೋಪ್ಪುರು-ಸಿವ್ದಿ ನಡುವೆ ಏಕಾಏಕಿ ಕಲ್ಲುಬಂಡೆ ಉರುಳಿಬಿದ್ದ ಪರಿಣಾಮ ರೈಲಿನ 5 ಬೋಗಿಗಳು ಹಳಿ ತಪ್ಪಿದ್ದು,ಅದೃಷ್ಟವಶಾತ್ ರೈಲಿನ ವೇಗ ಕಡಿಮೆ ಇದ್ದುದರಿಂದಾಗಿ ಪ್ರಯಾಣಿಕರು ಯಾವುದೇ ಅಪಾಯವಾಗದೇ ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ವರದಿ ಮಾಡಿದೆ.
ಮಾಹಿತಿಗಳ ಪ್ರಕಾರ ರೈಲಿನಲ್ಲಿ 2348 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೇ ಉನ್ನತ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತವು ಸ್ಥಳಕ್ಕೆ ಭೇಟಿ ನೀಡಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ನ ಪ್ರಯಾಣಿಕರನ್ನು ಅವರು ಹೋಗ ಬೇಕಿದ್ದ ಊರುಗಳಿಗೆ ಕಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.