ಕಡಬ : ಕಾಣಿಯೂರಿನ ಅಂಗಡಿಯಿಂದ ಹಾಡುಹಗಲೇ 1.20 ಲಕ್ಷ ನಗದು ಕಳವು

Share the Article

ಕಾಣಿಯೂರು: ಹಾಡಹಗಲೇ ಅಂಗಡಿಯಿಂದ ರೂ 1.20ಲಕ್ಷ ನಗದು ಕಳವುಗೈದ ಘಟನೆ ಕಾಣಿಯೂರಿನಲ್ಲಿ ಗುರುವಾರ ನಡೆದಿದೆ. ದಿವೀಶ್ ಅಂಬುಲ ಎಂಬವರು ಕಾಣಿಯೂರಿನಲ್ಲಿ ಶ್ರೀದುರ್ಗಾ ಎಂಟರ್‌ಪ್ರೈಸಸ್‌ನಲ್ಲಿ ತೆಂಗಿನಕಾಯಿ, ಬಾಳೆಗೊನೆ ವ್ಯಾಪಾರ ನಡೆಸುತ್ತಿದ್ದು, ಅಂಗಡಿಯ ಮೇಜಿನ ಡ್ರಾವರ್‌ನಲ್ಲಿ ಹಣವನ್ನು ಇಟ್ಟಿದ್ದರು. ಮಧ್ಯಾಹ್ನ ದಿವೀಶ್ ಅವರು ಎಂದಿನಂತೆ ಅರ್ಧ ಶಟರ್ ಹಾಕಿ ಊಟಕ್ಕೆ ತೆರಳಿದ ಸಂದರ್ಭದಲ್ಲಿ ಯಾರೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಅಂಗಡಿ ಮಾಲಕ ದಿವೀಶ್‌ರವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Leave A Reply