ಕಡಬ : ಕೋಡಿಂಬಾಳದ ಗೋಮಾಳ ಅತಿಕ್ರಮಣ ಆರೋಪ: ಗಡಿಗುರುತು ಮಾಡಿ ವಶಕ್ಕೆ ಪಡೆಯಲು ಎಸ್. ಡಿ. ಪಿ.ಐ ಆಗ್ರಹ
ಕಡಬ: ತಾಲೂಕಿನ ಕೊಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿರುವ ಗೋಮಾಳ ಜಾಗ ಅತಿಕ್ರಮಣವಾಗಿರುವ ಸಂಶಯವಿದ್ದು, ಅದನ್ನು ಗಡಿಗುರುತು ಮಾಡಿ ಬೇಲಿ ಅಳವಡಿಸಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಕಡಬ ಬ್ಲಾಕ್ ಎಸ್.ಡಿ.ಪಿ.ಐ ಸಮಿತಿ ಒತ್ತಾಯಿಸಿದೆ.
ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಅವರ ನೇತೃತ್ವದ ತಂಡ ಕಡಬ ತಹಶೀಲ್ದಾರ್ ಗೆ ಮನವಿ ನೀಡಿದೆ.
ತಾಲೂಕಿನ ಸರ್ಕಾರಿ ಕಛೇರಿಗಳಿಗೆ ಬೇಕಾದ ಜಾಗದ ಕೊರತೆಯಿದೆ, ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ವಾಸ್ತವ್ಯ ಮಾಡುತ್ತಿದ್ದಲ್ಲಿ ತೆರವುಗೊಳಿಸಬೇಕು. ಸೂಕ್ತ ತನಿಖೆ ನಡೆಸಿ ಗೋಮಾಳ ಜಾಗವನ್ನು ಗಡಿಗುರುತು ಮಾಡಿ ವಶಕ್ಕೆ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಾದಿ ಅನಿವಾರ್ಯ ಎಂದು ಮಾರ್ಟಿಸ್ ಎಚ್ಚರಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಎಸ್.ಡಿ.ಪಿ ಐ ರಾಜ್ಯ ಸಮಿತಿ ಕಾರ್ಯದರ್ಶಿ ಆನಂದ ಮಿತ್ತಬೈಲ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ , ಕಡಬ ಬ್ಲಾಕ್ ಸಮಿತಿ ಉಪಾಧ್ಯಕ್ಷ ರಮ್ಲ ಸನ್ ರೈಸ್, ಕಡಬ ತಾಲೂಕಿನ ಪ್ರಧಾನ ಕಾರ್ಯದರ್ಶಿ ಮುಸ್ತಾಫ್, ಸದಸ್ಯರಾದ ಹಾರಿಸ್ ಕಳಾರ, ಗಣೇಶ್ ಕಾಯರಡ್ಕ ಸುಂದರ ಕೊಡಿಂಬಾಳ ಮೊದಲಾದವರಿದ್ದರು.