ಪುತ್ತೂರು : ಕೊಟ್ಟ ಸಾಲ ಕೇಳಿದನೆಂದು ಕ್ಲೀನರ್ನನ್ನು ಅರ್ಧ ದಾರಿಯಲ್ಲಿ ಇಳಿಸಿ ಬಿಟ್ಟು ಹೋದ ಲಾರಿ ಚಾಲಕ
ಪುತ್ತೂರು : ಸಾಲವಾಗಿ ಕೊಟ್ಟಿದ್ದ ಎಂಟು ಸಾವಿರ ರೂ.ಗಳನ್ನು ವಾಪಸು ನೀಡುವಂತೆ ಕ್ಲೀನರ್ ಕೇಳಿದನೆಂದು ಆತನನ್ನು ಲಾರಿ ಚಾಲಕ ಅರ್ಧ ದಾರಿಯಲ್ಲಿ ಇಳಿಸಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವರದಿಯಾಗಿದೆ.
ಗೌರಿಬಿದನೂರಿನ ಸತೀಶ್ ಅರ್ಧ ದಾರಿಯಲ್ಲಿ ಬಾಕಿಯಾಗಿ ಸಂಕಷ್ಟಕ್ಕೆ ಸಿಲುಕಿದ ಲಾರಿ ಕ್ಲೀನರ್.ಬೆಂಗಳೂರಿನಿಂದ ಕ್ಯಾಪ್ಸಿಕಂ ಅನ್ನು ಲಾರಿಯಲ್ಲಿ ಹೇರಿಕೊಂಡು ಚಾಲಕ ಮತ್ತು ನಿರ್ವಾಹಕ ವಿಟ್ಲ ತಲುಪಿದ್ದರು. ಆಗ ಕ್ಲೀನರ್ ತಾನು ಚಾಲಕನಿಗರ ಸಾಲವಾಗಿ ನೀಡಿದ ಹಣವನ್ನು ಕೊಡುವಂತೆ ಕೇಳಿದ್ದಾನೆ, ಆತನನ್ನು ಗದರಿಸಿದ ಚಾಲಕನು ಆತನಲ್ಲಿದ್ದ ಮೊಬೈಲ್, ಪರ್ಸ್ ಕಿತ್ತುಕೊಂಡು ಲಾರಿಯಿಂದ ಬಲವಂತವಾಗಿ ಕೆಳಗಿಳಿಸಿ ಬಿಟ್ಟು ಹೋದನು.
ಯುವಕ ವಿಟ್ಲದಿಂದ ಪುತ್ತೂರು ಮಾರ್ಗವಾಗಿ ನಡೆದುಕೊಂಡು ಸವಣೂರು ಸಮೀಪ ತಲುಪಿದ್ದು, ಈ ವೇಳೆ ಬೈಕ್ ಸವಾರ ಪುತ್ತೂರಿನಲ್ಲಿ ಉದ್ಯೋಗಿಯಾಗಿರುವ ಬೆಳ್ತಂಗಡಿ ಲಾಯಿಲದ ಯುವಕನಲ್ಲಿ ಡ್ರಾಪ್ ಕೇಳಿದ್ದಾನೆ. ಬೈಕ್ ಸವಾರ ವಿಚಾರಿಸಿದಾಗ ಕ್ಲೀನರ್ ತನ್ನ ಸಂಕಷ್ಟವನ್ನು ವಿವರಿಸಿದರು. ಕೊನೆಗೆ ಬೈಕ್ ಸವಾರ ಆ ಯುವಕನನ್ನು ಪುತ್ತೂರಿಗೆ ಕರೆತಂದು ಬಸ್ ಟಿಕೆಟ್, ಊಟ ಉಪಾಹಾರಕ್ಕಾಗಿ 800 ರೂ. ಕೊಟ್ಟು ಕಳುಹಿಸಿದ್ದಾರೆ.