ಪ್ರಿವೆಡ್ಡಿಂಗ್ ಫೋಟೋಶೂಟ್ ಹುಚ್ಚು!!ನದಿಯ ಮಧ್ಯೆ ನಿಂತು ಫೋಟೋಶೂಟ್ ಮಾಡುತ್ತಿರುವಾಗ ಹೆಚ್ಚಿದ ನೀರಿನ ಪ್ರಮಾಣ!!
ಇತ್ತೀಚಿನ ದಿನಗಳಲ್ಲಿ ನವಜೋಡಿಯ ಮದುವೆಗೆ ಮೊದಲು ನಡೆಯುವ ಫೋಟೋ ಶೂಟ್ ಎಲ್ಲೆಡೆ ಕಾಮನ್. ವಧು-ವರ ಪರಸ್ಪರ ಅಪ್ಪಿಕೊಳ್ಳುವ, ರೋಮ್ಯಾನ್ಸ್ ಮಾಡುವ ಹೀಗೆ ಹತ್ತುಹಲವು ಫೋಟೋಗಳನ್ನು ಫೋಟೋಗ್ರಾಫರ್ ಗಳು ತಮ್ಮ ಕಲ್ಪನೆಯ ಕ್ಯಾಮೆರಾದಲ್ಲಿ ಹುಟ್ಟುಹಾಕುವುದು ಸ್ವಭಾವಿಕ. ಅಂತೆಯೇ ಇಲ್ಲೊಂದು ಜೋಡಿಯ ಫೋಟೋಶೂಟ್ ವಿಭಿನ್ನವಾಗಿದ್ದು ಅದೇನೋ ಒಂದು ಸಾಧನೆಗೆ ಹೊರಟ ರೀತಿ ನದಿಯ ಮಧ್ಯೆ ಫೋಟೋ ಗೆ ಪೋಸ್ ಕೊಡುತ್ತಿರುವಾಗ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ರಾಜಸ್ಥಾನದ ಪದಜಾರ್ ಖುರ್ದ್ ನಲ್ಲಿರುವ ಚಂಬಲ್ ನದಿಯ ರಾಣಾಪ್ರತಾಪ್ ಸಾಗರ್ ಅಣೆಕಟ್ಟಿನಲ್ಲಿ ಈ ಘಟನೆ ನಡೆದಿದ್ದು,ಮದುವೆಯಾಗಲಿದ್ದ ಜೋಡಿಯೊಂದು ತಮ್ಮ ಸುಂದರ ಫೋಟೋಶೂಟ್ ಗಾಗಿ ನದಿಯ ಮಧ್ಯೆ ನಿಂತು ಪೋಸ್ ಕೊಡುತ್ತಿರುವಾಗ ನೀರಿನ ಪ್ರಮಾಣ ಏರಿಕೆಯಾಗಿದ್ದು, ಕೂಡಲೇ ಅಪಾಯ ಅರಿತ ಕ್ಯಾಮರ ಮ್ಯಾನ್ ಸಹಿತ ಜೋಡಿಯು ದೊಡ್ಡ ಬಂಡೆಯೊಂದಕ್ಕೆ ಹತ್ತಿಕುಳಿತಿದ್ದು, ಆ ಬಳಿಕ ರಕ್ಷಣಾ ಪಡೆ ಆಗಮಿಸಿ ಜೋಡಿಸಹಿತ ಇತರ ನಾಲ್ವರನ್ನು ರಕ್ಷಿಸಿದ್ದಾರೆ.
ಒಟ್ಟಿನಲ್ಲಿ ಜೋಡಿಗಳ ಫೋಟೋ ಶೂಟ್ ಹುಚ್ಚು ಅರಳುವ ಮೊದಲೇ ಬಾಡುವಂತಾಗುತಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಜೋಡಿಗಳ ಅತಿರೇಕದ ವರ್ತನೆಗೆ ಆಕ್ರೋಶಿತರಾಗಿದ್ದಾರೆ.