ಕೋಡಿಂಬಾಳ: ಬಾಲಕಿಯನ್ನು ಹಿಂಬಾಲಿಸಿದ ಕಾರು ಚಾಲಕ ಪ್ರಕರಣ | ಇದರ ಅಸಲಿಯತ್ತು ಏನು ಗೊತ್ತಾ?
ಕಡಬ: ನ.9ರ ಸಂಜೆ ಕೋಡಿಂಬಾಳ-ಮಡ್ಯಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ್ದು ಇದನ್ನು ಗಮನಿಸಿದ ಶಾಲಾ ಬಾಲಕಿ ಓಡಿ ತಪ್ಪಿಸಿಕೊಂಡಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಇದರ ಅಸಲಿ ಸತ್ಯ ಇದೀಗ ಬಹಿರಂಗಗೊಂಡಿದೆ.
ಕಡಬ ಪಟ್ಟಣ ಪಂಚಾಯತ್ನಿಂದ ಈಗಾಗಲೇ ವಾರ್ಡ್ ವಿಂಗಡನೆಗೆ ಸಂಬಂಧಿಸಿ ಪಂಚಾಯತ್ ಸಿಬ್ಬಂದಿಗಳು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜಿ.ಪಿ.ಎಸ್. ಮಾಡುವ ಕೆಲಸವನ್ನು ಈಗಾಗಲೇ ಮಾಡುತ್ತಿದ್ದಾರೆ. ಅಂತೆಯೇ ನ.9ರಂದು ಕೋಡಿಂಬಾಳ ಗ್ರಾಮದ ಉಂಡಿಲ ಕ್ರಾಸ್ ಬಳಿ ಪಂಚಾಯತ್ನ ಇಬ್ಬರು ಸಿಬ್ಬಂದಿಗಳು ಜಿ.ಪಿ.ಎಸ್. ಮಾಡುತ್ತಿದ್ದರು. ಎನ್ನಲಾಗಿದೆ. ಈ ವೇಳೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಜಿ.ಪಿ.ಎಸ್. ಮಾಡುವ ಸಲುವಾಗಿ ಕಾರಿನಿಂದ ಇಳಿದಿದ್ದು ಇದನ್ನು ಕಂಡ ವಿದ್ಯಾರ್ಥಿನಿಯೂ ಓಡಿ ಹೋಗಿದ್ದಳು, ಈ ವಿಚಾರವೂ ಸಿಬ್ಬಂದಿಗಳ ಗಮನಕ್ಕೂ ಬಂದಿತ್ತು, ಬಾಲಕಿ ಮನೆಗೆ ಹೋಗಿ ಪೋಷಕರಲ್ಲಿ ತಿಳಿಸಿದ್ದು ಬಳಿಕ ಪೋಷಕರು ಪೋಲಿಸರಿಗೆ ಹಾಗೂ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ರಾತ್ರಿ ವೇಳೆ ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಈ ವಿಚಾರವನ್ನು ತಿಳಿದ ಪಂಚಾಯತ್ ಸಿಬ್ಬಂದಿಗಳು ಸಾರ್ವಜನಿಕರು ಗೊಂದಲ ಪಡುವುದು ಬೇಡ ಎನ್ನುವ ದೃಷ್ಟಿಯಿಂದ ನಡೆದ ಘಟನೆಯನ್ನು ಪೋಲಿಸರಲ್ಲಿ ಹಾಗೂ ಸಂಬಂಧಪಟ್ಟವರಲ್ಲಿ ತಿಳಿಸಿದ್ದಾರೆ. ಇಲ್ಲಿ ವಿದ್ಯಾರ್ಥಿನಿ ತಪ್ಪು ಗ್ರಹಿಕೆಯಿಂದ ಓಡಿದ್ದು ಎಂದು ಇಲ್ಲಿ ಯಾರು ಬಾಲಕಿಯನ್ನು ಹಿಂಬಾಲಿಸಿಲ್ಲ ಎಂದು ಇದೀಗ ಸ್ಪಷ್ಟನೆ ಲಭಿಸಿದೆ