of your HTML document.

ಸಮುದ್ರ ವಿಹಾರಕ್ಕೆ ಬಂದ ಬೆಂಗಳೂರಿನ ಯುವಕ ನೀರು ಪಾಲು

ಮಂಗಳೂರು : ಸಮುದ್ರ ವಿಹಾರಕ್ಕೆಂದು ಬಂದ ಯುವಕನೋರ್ವ ಸಮುದ್ರದ ಪಾಲಾದ ಘಟನೆ ಪಣಂಬೂರು ಬೀಚ್‌ನಲ್ಲಿ ಸೋಮವಾರ ನಡೆದಿದೆ.

ಸಮುದ್ರದ ಪಾಲಾದ ಯುವಕನನ್ನು ಬೆಂಗಳೂರು ಮೂಲದ ದಿನೇಶ್ (20)ಎಂದು ಗುರುತಿಸಲಾಗಿದೆ.

ದಿನೇಶ್ ತನ್ನ ಸ್ನೇಹಿತರಾದ ದೀಪಕ್, ಶ್ರೀನಿವಾಸ, ಪ್ರಶಾಂತ್, ಸುನೀಲ್, ಸುದೀಪ್, ಪ್ರಜ್ವಲ್, ಸೀನಾ ಎಂಬವರೊಂದಿಗೆ ನ.7ರಂದು ಬೆಂಗಳೂರಿನಿಂದ ಕಾರು ಮಾಡಿಕೊಂಡು ಪಣಂಬೂರು ಬೀಚ್‌ಗೆ ಬಂದಿದ್ದರು. ಈ ಸಂದರ್ಭ ಸ್ನಾನಕ್ಕೆಂದು 8 ಮಂದಿ ಸಮುದ್ರಕ್ಕಿಳಿದಿದ್ದು, ಭಾರೀ ಅಲೆಯೊಂದು ದಿನೇಶ್‌ನನ್ನು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ತಂಡದ ಇತರರು ಆತನ ರಕ್ಷಣೆ ಯತ್ನಿಸಿದರೂ ಆತ ಸಮುದ್ರ ಪಾಲಾಗಿದ್ದು, ಈತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.