of your HTML document.

ಶಾಲಾ ಮಕ್ಕಳ ಹೊಟ್ಟೆಯ ಮೇಲೆ ತಟ್ಟಿದ ಬೆಲೆ ಏರಿಕೆಯ ಹೊಡೆತ!! ಏರಿಕೆಯಾದ ಬೆಲೆಯ ನಡುವೆ ಸಪ್ಪೆಯಾದ ಮಕ್ಕಳ ಬಿಸಿಯೂಟ

ದೇಶಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಲೆ ಏರಿಕೆಯ ಮಾತಿನ ಮಧ್ಯೆ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಕ್ಕಳ ಬಿಸಿಯೂಟ ಸಪ್ಪೆಯಾಗಿದೆ.

ಮಕ್ಕಳಿಗೆ ಅನ್ನ ಸಾಂಬರ್ ಜೊತೆಗೆ ಪಲಾವು, ಬಿಸಿಬೇಳೆ ಬಾತ್ ಉಪ್ಪಿಟ್ಟು ಸಹಿತ ವಿವಿಧ ಖಾದ್ಯಗಳ ತಯಾರಿಗೆ ಈಗಾಗಲೇ ಯೋಜನೆಯಿದ್ದು, ಈಗಾಗಲೇ ಒಬ್ಬ ವಿದ್ಯಾರ್ಥಿಗೆ ವಯಸ್ಸಿನ ಆಧಾರದ ಮೇಲೆ 4.97 ರೂಪಾಯಿ ಮತ್ತು 7.45 ಹಾಗೂ 11.41 ಸರ್ಕಾರ ನಿಗದಿಪಡಿಸಿದ್ದು, ಇದರಲ್ಲಿ ಉಪ್ಪು, ಅಕ್ಕಿ, ಬೇಳೆ, ಎಣ್ಣೆ, ಖಾರದ ಪುಡಿ ಎಲ್ಲವೂ ಸೇರಬೇಕಾಗುತ್ತದೆ.

ಸದ್ಯ ಎಲ್ಲಾ ವಸ್ತುಗಳ ಬೆಲೆಯ ಜೊತೆಗೆ ತರಕಾರಿ ಬೆಲೆಯೂ ಏರಿಕೆಯಾಗಿದ್ದು ಹೀಗಾಗಿ ಮಕ್ಕಳಿಗೆ ತಯಾರಿಸುವ ಅಡುಗೆಯಲ್ಲಿ ತರಕಾರಿಯ ಪ್ರಮಾಣ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಬೆಲೆ ಏರಿಕೆಯ ಹೊಡೆತ ಮಕ್ಕಳ ಹೊಟ್ಟೆಗೂ ಬಿದ್ದಿದ್ದು ಮಕ್ಕಳ ಊಟ ಸಪ್ಪೆಯಾಗಿಹೋಗಿದೆ.

Leave A Reply

Your email address will not be published.